ಕ್ವೀನ್ಸ್ ಟೂರ್ನಿಯ ಪ್ರಮುಖ ಸುತ್ತಿಗೆ ಭಾಂಬ್ರಿ ಲಗ್ಗೆ

Yuki Bhambri sets up clash with Milos Raonic
Highlights

ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ತಯಾರಿಗಾಗಿ ನಡೆಸುತ್ತಿರುವ ಭಾರತದ ಯೂಕಿ ಭಾಂಬ್ರಿ, ಭಾರತೀಯರ ಕನಸು ನನಸಾಗಿಸೋ ವಿಶ್ವಾಸದಲ್ಲಿದ್ದಾರೆ. ಕ್ವೀನ್ಸ್ ಟೂರ್ನಿಯ ಪ್ರಮುಖ ಸುತ್ತಿಗೆ ಭಾಂಬ್ರಿ ಎಂಟ್ರಿ ಪಡೆಯೋ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ.

ಲಂಡನ್ ಜೂ.18): ಭಾರತದ ಸಿಂಗಲ್ಸ್ ಟೆನಿಸ್ ತಾರೆ ಯೂಕಿ ಭಾಂಬ್ರಿ, ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ತಯಾರಿಗಾಗಿ ನಡೆಯುತ್ತಿರುವ ಕ್ವೀನ್ಸ್ ಟೂರ್ನಿಯ ಪ್ರಮುಖ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಇದರೊಂದಿಗೆ ಯೂಕಿ ಪ್ರಮುಖ ಹಂತದ ಮೊದಲ ಸುತ್ತಿನಲ್ಲಿ ಕೆನಡಾದ ಮಿಲೋಸ್ ರೋನಿಕ್ ಎದುರು ಸೆಣಸಲಿದ್ದಾರೆ. ಭಾನುವಾರ ನಡೆದ ಕೊನೆಯ ಅರ್ಹತಾ ಸುತ್ತಿನಲ್ಲಿ ಯೂಕಿ ಭಾಂಬ್ರಿ, ಅಮೆರಿಕದ ಟೇಲರ್ ಫ್ರಿಟ್ಜ್‌ರನ್ನು 6-4,6-2 ನೇರ ಸೆಟ್‌ಗಳಲ್ಲಿ ಮಣಿಸಿದರು. 

ಇಲ್‌ಕ್ಲೇ ಚಾಲೆಂಜರ್ ಟ್ರೋಫಿ ಟೆನಿಸ್ ಟೂರ್ನಿಯಲ್ಲಿ ಭಾರತದ ಮತ್ತೊಬ್ಬ ಟೆನಿಸಿಗ ಪ್ರಜ್ನೇಶ್ ಗುಣೇಶ್ವರನ್, ಅರ್ಹತಾ ವಿಭಾಗದ 2ನೇ ಸುತ್ತಿನಲ್ಲಿ ನಿವೃತ್ತಿ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಪ್ರಜ್ನೇಶ್ 6-4,6-2 ಸೆಟ್‌ಗಳಲ್ಲಿ ಅಮೆರಿಕದ ನೊವಿಕೊವ್ ಎದುರು ಗೆದ್ದರು. ಸೋಮವಾರ ನಡೆಯಬೇಕಿದ್ದ 2ನೇ ಅರ್ಹತಾ ಪಂದ್ಯದಲ್ಲಿ ಪ್ರಜ್ನೇಶ್, ಜಪಾನ್‌ನ ಹಿರೊಕಿ ಮೊರಿಯಾ ಎದುರು ಸೆಣಸಬೇಕಿತ್ತು. ಆದರೆ ಪ್ರಜ್ನೇಶ್ ಹಿಂದೆ ಸರಿದಿದ್ದಾರೆ. 

ಅಂಕಿತಾಗೆ ಸೋಲು: ಡಬ್ಲ್ಯೂಟಿಎ ನೇಚರ್ ವ್ಯಾಲಿ ಕ್ಲಾಸಿಕ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತದ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ 3-6,6-3,4-6 ಸೆಟ್‌ಗಳಲ್ಲಿ ಆಸ್ಟ್ರೇಲಿಯಾದ ಪ್ರಿಸಿಲ್ಲಾ ಹಾನ್ ಎದರು ಪರಾಭವ ಹೊಂದಿದರು. ಆರಂಭದಲ್ಲಿಯೇ ಪ್ರಿಸಿಲ್ಲಾ, ಅಂಕಿತಾ ಎದುರು ಉತ್ತಮ ಆಟವಾಡಿದರು. ಮೊದಲ ಸೆಟ್‌ನಲ್ಲಿ ಮುನ್ನಡೆದ ಪ್ರಿಸಿಲ್ಲಾಗೆ, 2ನೇ ಸೆಟ್‌ನ್ಲಲಿ ಅಂಕಿತಾ ತಿರುಗೇಟು ನೀಡಿದರು.
ಆದರೆ 3ನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿ ಪಂದ್ಯ ಕೈ ಬಿಟ್ಟರು

loader