Asianet Suvarna News Asianet Suvarna News

ಕಿರಿಯರ್ ಒಲಿಂಪಿಕ್ಸ್: ಪುರುಷ, ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಬೆಳ್ಳಿ

ಕಿರಿಯರ ಒಲಿಂಪಿಕ್ಸ್‌ನಲ್ಲಿ ಭಾರತದ ಪುರಷ ಹಾಗೂ ಮಹಿಳಾ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ಮುಗ್ಗರಿಸೋ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಇಲ್ಲಿದೆ ಈ ರೋಚಕ ಪಂದ್ಯದ ಹೈಲೈಟ್ಸ್.

Youth Olympics India Men and Women hockey team win Sliver medal
Author
Bengaluru, First Published Oct 16, 2018, 10:47 AM IST
  • Facebook
  • Twitter
  • Whatsapp

ಬ್ಯೂನಸ್ ಐರಿಸ್(ಅ.16): ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಇಲ್ಲಿ ನಡೆಯುತ್ತಿರುವ ಕಿರಿಯರ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸೋಲುಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿವೆ. ಫೈನಲ್‌ನಲ್ಲಿ ಎಡವಿದರೂ ಎರಡೂ ತಂಡಗಳು ಇತಿಹಾಸ ರಚಿಸಿವೆ. ಕಿರಿಯರ ಒಲಿಂಪಿಕ್ಸ್ ಹಾಕಿ-ಫೈವ್ಸ್‌ನಲ್ಲಿ ಭಾರತ ತಂಡಗಳಿಗೆ ಇದು ಚೊಚ್ಚಲ ಪದಕ.

ಪುರುಷರ ಫೈನಲ್‌ನಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 2-4 ಗೋಲುಗಳಲ್ಲಿ ಸೋಲುಂಡರೆ, ಮಹಿಳಾ ತಂಡ 1-3 ಗೋಲುಗಳಲ್ಲಿ ಅರ್ಜೆಂಟೀನಾ ವಿರುದ್ಧ
ಪರಾಭವಗೊಂಡಿತು. ಮಲೇಷ್ಯಾ ಪುರುಷರ ತಂಡ ಹಾಗೂ ಅರ್ಜೆಂಟೀನಾ ಮಹಿಳಾ ತಂಡಗಳಿಗೂ ಕೂಟದಲ್ಲಿ ಇದು ಮೊದಲ ಚಿನ್ನದ ಪದಕ.

ಪುರುಷರ ಚಿನ್ನದ ಪದಕದ ಪಂದ್ಯದಲ್ಲಿ ಭಾರತಕ್ಕೆ ನಾಯಕ ವಿವೇಕ್ ಪ್ರಸಾದ್ 2ನೇ ನಿಮಿಷದಲ್ಲೇ ಮುನ್ನಡೆ ಒದಗಿಸಿದರು. ಆದರೆ 4ನೇ ನಿಮಿಷದಲ್ಲಿ ಮಲೇಷ್ಯಾ
ಸಮಬಲ ಸಾಧಿಸಿತು. 5ನೇ ನಿಮಿಷದಲ್ಲಿ ವಿವೇಕ್ 2ನೇ ಗೋಲು ಬಾರಿಸಿ ಮೊದಲಾರ್ಧದ ಅಂತ್ಯಕ್ಕೆ ಮುನ್ನಡೆಯನ್ನು2-1 ಕ್ಕೇರಿಸಿದರು. 

ದ್ವಿತೀಯಾರ್ಧದಲ್ಲಿ 3 ಗೋಲು ಬಾರಿಸಿ ಮಲೇಷ್ಯಾ, ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡಿತು. ಮಹಿಳೆಯರ ಫೈನಲ್‌ನಲ್ಲಿ ಭಾರತ 49 ಸೆಕೆಂಡ್‌ಗಳಲ್ಲೇ ತನ್ನ ಮೊದಲ ಗೋಲು ಬಾರಿಸಿದರು. ಮುಮ್ತಾಜ್ ಖಾನ್ ಮೊದಲ ಗೋಲು ಗಳಿಸಿದರು. ಆರಂಭಿಕ ಗೋಲಿನಿಂದ ಆಘಾತಕ್ಕೊಳಗಾದರೂ ಅರ್ಜೆಂಟೀನಾ ಪುಟಿದೆದ್ದು ಜಯವನ್ನು ತನ್ನದಾಗಿಸಿಕೊಂಡಿತು. ಕೂಟದಲ್ಲಿ ಭಾರತ 4 ಚಿನ್ನ, 10 ಬೆಳ್ಳಿ (ಒಟ್ಟು 14) ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ. 

Follow Us:
Download App:
  • android
  • ios