ದುಬೈ(ಅ.21): ನಾನು ವಿದಾಯ ಹೇಳುವ ಮುನ್ನ ಒಂದು ಟೆಸ್ಟ್​​​​​ನಾದರೂ ಭಾರತ ವಿರುದ್ಧ ಆಡಬೇಕು ಎಂದು ಪಾಕಿಸ್ತಾನದ ಯೂನಿಸ್​​​​​ ಖಾನ್​​​ ಹೇಳಿಕೊಂಡಿದ್ದಾರೆ.

ಭಾರತ-ಪಾಕಿಸ್ತಾನ ತಂಡಗಳು ಟೆಸ್ಟ್​​​ನಲ್ಲಿ ಮುಖಮುಖಿಯಾಗಿ 9 ವರ್ಷಗಳೇ ಕಳೆದಿವೆ. ಕ್ರಿಕೆಟ್​​​ ಅಭಿಮಾನಿಗಳು ಈ ಎರಡೂ ತಂಡಗಳು ಆಡೋದನ್ನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಟೆಸ್ಟ್​​​ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲು ಎರಡೂ ದೇಶಗಳು ಪೈಪೊಟಿ ನಡೆಸುತ್ತಿವೆ. ಹಾಗಾಗಿ  ಎರಡೂ ದೇಶಗಳ ಭಾಂಧವ್ಯ ಏನೇ ಇದ್ದರು ಕ್ರಿಕೆಟ್​​ ಆಡುವುದನ್ನ ನಿಲ್ಲಿಸಬಾರದು ಎಂದು ಯೂನಿಸ್​​ ಖಾನ್​​ ಹೇಳಿಕೊಂಡಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಪಲ್ಲಟಗಳು ಏರ್ಪಟ್ಟ ಹಿನ್ನೆಲೆಯಲ್ಲಿ 2007 ರಿಂದ ಇಲ್ಲಿಯವರೆಗೂ ಒಮ್ಮೆಯೂ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ.