ಪ್ರಸ್ತುತ ಯೂನಿಸ್ ಖಾನ್ ವೆಸ್ಟ್'ಇಂಡಿಸ್ ವಿರುದ್ಧದ ಅಂತಿಮ ಟೆಸ್ಟ್ ಸರಣಿಯನ್ನು ಆಡುತ್ತಿದ್ದಾರೆ.

ಕರಾಚಿ(ಮೇ.13): ನಿವೃತ್ತಿ ಬಳಿಕ ಆಫ್ಘಾನಿಸ್ತಾನ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವರದಿಯನ್ನು ನಿರಾಕರಿಸಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌, ಆ ರೀತಿಯ ಯಾವುದೇ ಪ್ರಸ್ತಾಪ ತಮಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಫ್ಘಾನಿಸ್ತಾನ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಯೂನಿಸ್‌ ಖಾನ್‌ ಸಮ್ಮತಿ ಸೂಚಿಸಿದ್ದಾರೆ ಎಂದು ಆಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ (ಎಸಿಬಿ) ಮುಖ್ಯಸ್ಥ ಆತಿಫ್‌ ಮಶಾಲ್‌ ಗುರುವಾರ ತಿಳಿಸಿದ್ದರು. 
ಆದರೆ ಇದನ್ನು ನಿರಾಕರಿಸಿರುವ ಯೂನಿಸ್‌, ಆಫ್ಘಾನಿಸ್ತಾನದಿಂದ ಆ ರೀತಿಯ ಯಾವುದೇ ಪ್ರಸ್ತಾಪ ಬಂದಿಲ್ಲ , ಭವಿಷ್ಯದ ಬಗ್ಗೆ ನಿವೃತ್ತಿಯ ಬಳಿಕ ಯೋಚಿಸುತ್ತೇನೆ ಎಂದಿದ್ದಾರೆ. 

ಪ್ರಸ್ತುತ ಯೂನಿಸ್ ಖಾನ್ ವೆಸ್ಟ್'ಇಂಡಿಸ್ ವಿರುದ್ಧದ ಅಂತಿಮ ಟೆಸ್ಟ್ ಸರಣಿಯನ್ನು ಆಡುತ್ತಿದ್ದಾರೆ.