ಕೋಲ್ಕತಾ[ಮಾ.21]: ಸ್ನೇಹಾರ್ಥ ಪಂದ್ಯದ ವೇಳೆ ಮೈದಾನದಲ್ಲೇ ಕುಸಿದು ಯುವ ಕ್ಲಬ್‌ ಕ್ರಿಕೆಟಿಗನೊಬ್ಬ ಸಾವನ್ನಪ್ಪಿದ ಘಟನೆ ಬುಧವಾರ ಇಲ್ಲಿ ನಡೆದಿದೆ. 

ಬಂಗಾಳ ದ್ವಿತೀಯ ದರ್ಜೆ ಲೀಗ್‌ನಲ್ಲಿ ಆಡುವ ಬಾಲಿಗುಂಗೆ ಸ್ಪೋರ್ಟಿಂಗ್‌ ಕ್ಲಬ್‌ನ 22 ವರ್ಷದ ಸೋನು ಯಾದವ್‌ ಸಾವನ್ನಪ್ಪಿದ ದುರ್ದೈವಿ. ಇಲ್ಲಿನ ಬಾಟಾ ಕ್ಲಬ್‌ ಮೈದಾನದಲ್ಲಿ ಆಟವಾಡುತ್ತಿದ್ದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸೋನು ತಮ್ಮ ಬ್ಯಾಟಿಂಗ್‌ ಮುಗಿಸಿ ಟೆಂಟ್‌ನತ್ತ ವಾಪಸಾಗುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ. 

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ವೈದರು ತಿಳಿಸಿದ್ದಾರೆ. ಸೋನು ನಿಧಾನಕ್ಕೆ ಬಂಗಾಳ ಕ್ರಿಕೆಟ್‌ ಸಂತಾಸ ಸೂಚಿಸಿದೆ.