ಸಾಮಾನ್ಯವಾಗಿ ಆಟಗಾರರು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಆರತಿ ಬೆಳಗಿ, ಹೂವಿನ ಹಾರ ಹಾಕಿ ಸ್ವಾಗತ ಕೋರಲಾಗುವುದು. ಆದರೆ, ಆಟಗಾರರು ತಂಗಿರುವ ಹೋಟೆಲ್ ಸಿಬ್ಬಂದಿ, ಆಟಗಾರರಿಗೆ ಹಾರಕ್ಕೆ ಬದಲು ಕೇಸರಿ ಶಾಲು ಹೊದಿಸಿ ಸ್ವಾಗತ ಕೋರಿದ್ದಾರೆ.

ಕಾನ್ಪುರ(ಅ.28): ಭಾನುವಾರ ನಡೆಯಲಿರುವ 3 ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನಾಡಲು ಕಾನ್ಪುರಕ್ಕೆ ಗುರುವಾರ ಸಂಜೆ ಆಗಮಿಸಿದ ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರರಿಗೆ ಕೇಸರಿ ಸ್ವಾಗತ ದೊರೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾನ್ಯವಾಗಿ ಆಟಗಾರರು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಆರತಿ ಬೆಳಗಿ, ಹೂವಿನ ಹಾರ ಹಾಕಿ ಸ್ವಾಗತ ಕೋರಲಾಗುವುದು. ಆದರೆ, ಆಟಗಾರರು ತಂಗಿರುವ ಹೋಟೆಲ್ ಸಿಬ್ಬಂದಿ, ಆಟಗಾರರಿಗೆ ಹಾರಕ್ಕೆ ಬದಲು ಕೇಸರಿ ಶಾಲು ಹೊದಿಸಿ ಸ್ವಾಗತ ಕೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್‌'ನ ವ್ಯವಸ್ಥಾಪಕ ನಿರ್ದೇಶಕ ವಿಕಾಸ್, ‘ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆಯಿಂದ ಪ್ರೇರಣೆಗೊಂಡು ಆಟಗಾರರಿಗೆ ಭಾರತೀಯ ಸಂಸ್ಕೃತಿಯ ಅನುಭವ ನೀಡುವ ಸಲುವಾಗಿ ಈ ರೀತಿಯ ಸ್ವಾಗತ ನೀಡಲಾಯಿತು’ ಎಂದಿದ್ದಾರೆ.