ಕಳೆದ ವರ್ಷದ ಐಪಿಎಲ್ ಅವತರಣಿಕೆಯಲ್ಲಿ ಡಿಕಾಕ್ 13 ಪಂದ್ಯಗಳನ್ನಾಡಿ 445 ರನ್ ಕಲೆಹಾಕಿದ್ದರು.
ನವದೆಹಲಿ(ಮಾ.24): ಇಂಡಿಯನ್ ಪ್ರೀಮಿಯರ್ ಲೀಗ್'ಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಡೆಲ್ಲಿ ಡೇರ್'ಡೆವಿಲ್ಸ್ ತಂಡಕ್ಕೆ ಶಾಕಿಂಗ್ ನ್ಯೂಸ್'ವೊಂದು ಎದುರಾಗಿದೆ.
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ'ಕಾಕ್ ಬಲ ತೋರುಬೆರಳು ಗಾಯದಿಂದಾಗಿ ಐಪಿಎಲ್ 10 ಸೀಸನ್'ನಿಂದ ಹೊರಬಿದ್ದಿದ್ದಾರೆ. ಗಾಯದಿಂದ ಸಂಪೂರ್ಣ ಗುಣಮುಖರಾಗಲು ಕನಿಷ್ಟ ಆರು ವಾರ ವಿಶ್ರಾಂತಿಯ ಅವಶ್ಯಕತೆಯಿರುವುದರಿಂದ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಈ ಬಾರಿಯ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಡಿಕಾಕ್ ಅನುಪಸ್ಥಿತಿ ಡೆಲ್ಲಿ ಡೇರ್'ಡೆವಿಲ್ಸ್ ತಂಡಕ್ಕೆ ದೊಡ್ಡ ಹೊಡೆತವೇ ಸರಿ. ಕಳೆದ ವರ್ಷದ ಐಪಿಎಲ್ ಅವತರಣಿಕೆಯಲ್ಲಿ ಡಿಕಾಕ್ 13 ಪಂದ್ಯಗಳನ್ನಾಡಿ 445 ರನ್ ಕಲೆಹಾಕಿದ್ದರು.
ಜೆ.ಪಿ ಡುಮಿನಿ ನಂತರ ಡಿಕಾಕ್ ಈ ಬಾರಿಯ ಐಪಿಎಲ್ ಟೂರ್ನಿ ಮಿಸ್ ಮಾಡಿಕೊಳ್ಳುತ್ತಿರುವ ಡೇರ್ ಡೆವಿಲ್ಸ್ ತಂಡದ ಎರಡನೇ ಆಟಗಾರರೆನಿಸಿದ್ದಾರೆ. ಇನ್ನು ಆರ್'ಸಿಬಿ ತಂಡದ ಮಿಚೆಲ್ ಸ್ಟಾರ್ಕ್ ಕೂಡ ಈ ಬಾರಿ ಐಪಿಎಲ್'ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
