ಅಬುದಾಬಿ, (ಡಿ.6): ಪಾಕಿಸ್ತಾನದ ಲೆಗ್​ ಸ್ಪಿನ್ನರ್​ ಯಾಸಿರ್​ ಶಾ ಗುರುವಾರ ಅತ್ಯಂತ ವೇಗವಾಗಿ 200 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲ್ಯಾಂಡ್​  ವಿರುದ್ಧದ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ ಈ ದಾಖಲೆ ನಿರ್ಮಿಸುವ ಮೂಲಕ 82 ವರ್ಷಗಳ ಹಳೇ ದಾಖಲೆ ಉಡೀಸ್ ಮಾಡಿದರು.

ವಿಲ್​ ಸೊಮರವಿಲ್ಲೆ ಅವರನ್ನ ಎಲ್ ಬಿಡ್ಲ್ಯೂ ಬಲೆಗೆ ಬೀಳಿಸುವ ಮೂಲಕ 200 ವಿಕೆಟ್ ಪಡೆದ ಬೌಲರ್​ ಎಂಬ ಹೆಗ್ಗಳಿಕೆಗೆ ಯಾಸಿರ್​ ಪಾತ್ರರಾದರು.

32 ವರ್ಷದ ಯಾಸೀರ್, ತಮ್ಮ 33ನೇ ಟೆಸ್ಟ್​ನಲ್ಲಿಯೇ ಎಲ್ಲರಿಗಿಂತ ವೇಗವಾಗಿ 200 ವಿಕೆಟ್​ ಪಡೆದ ದಾಖಲೆ ಬರೆದರು.

ಈ ಹಿಂದೆ 1936 ರಲ್ಲಿ ಆಸ್ಟ್ರೇಲಿಯಾದ ಲೆಗ್​ ಸ್ಪಿನ್ನರ್​ ಕ್ಲ್ಯಾರಿ ಗ್ರಿಮ್ಮೆಟ್​ 36 ಟೆಸ್ಟ್​ ಪಂದ್ಯಗಳಲ್ಲಿ 200ನೇ ವಿಕೆಟ್​ ಪಡೆದು ದಾಖಲೆ ಬರೆದಿದ್ದರು.