ಕೊಲ್ಕತ್ತಾ(ಅ.03): ತವರು ಪಿಚ್​ನಲ್ಲಿ ಚೊಚ್ಚಲ ಟೆಸ್ಟ್ ಆಡಿದ ವೃದ್ಧಿಮಾನ್ ಸಾಹ, ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ.

ಎರಡು ಇನ್ನಿಂಗ್ಸ್​​ನಲ್ಲಿ ಹಾಫ್ ಸೆಂಚುರಿ ಬಾರಿಸಿದ ಭಾರತದ 4ನೇ ವಿಕೆಟ್ ಕೀಪರ್ ಎನಿಸಿಕೊಂಡರು. ಧೋನಿ, ಫಾರೂಕ್ ಇಂಜಿನಿಯರ್ ಮತ್ತು ದಿಲವಾರ್ ಹುಸೇನ್ ಈ ಸಾಧನೆ ಮಾಡಿದ ಇತರರು. 

ಇನ್ನು ಎರಡು ಇನ್ನಿಂಗ್ಸ್​ನಲ್ಲೂ ಅರ್ಧಶತಕ ಬಾರಿಸಿ ಅಜೇಯರಾಗುಳಿದ ವಿಶ್ವದ 2ನೇ ವಿಕೆಟ್ ಕೀಪರ್ ಎನಿಸಿಕೊಂಡರು. ಗ್ಯಾರಿ ಅಲೆಕ್ಸಾಂಡರ್ ಈ ಸಾಧನೆ ಮಾಡಿದ್ದರು. ಸಾಹ ಈ ಎರಡು ರೆಕಾರ್ಡ್​ ಅನ್ನು ತವರಿನ ಪ್ರೇಕ್ಷಕರೆದುರು ಮಾಡಿದರು.