Asianet Suvarna News Asianet Suvarna News

Wrestlers Protest: ಬ್ರಿಜ್‌ಭೂಷಣ್‌ಗೆ ದೆಹಲಿ ಪೊಲೀಸ್‌ ಕ್ಲೀನ್‌ಚಿಟ್‌?

ಲೈಂಗಿಕ ಕಿರುಕುಳ ಆರೋಒ ಎದರಿಸುತ್ತಿರುವ ಬ್ರಿಜ್‌ಭೂಷಣ್ ಶರಣ್ ಸಿಂಗ್
ಸಾಕ್ಷ್ಯಾಧಾರ ಲಭ್ಯವಾಗಿಲ್ಲ, 15 ದಿನ​ದಲ್ಲಿ ಕೋರ್ಟ್‌ಗೆ ಡೆಲ್ಲಿ ಪೊಲೀಸ್ ಅಂತಿಮ ವರದಿ
ಬ್ರಿಜ್‌ಭೂಷಣ್‌ಗೆ ಕ್ಲೀನ್‌ಚಿಟ್ ನೀಡುವ ಸಾಧ್ಯತೆ

Wrestlers Protest No Sufficient Evidence Against Brij Bhushan Singh Delhi Police likely to give Clean Chit kvn
Author
First Published Jun 1, 2023, 7:56 AM IST

ನವ​ದೆ​ಹ​ಲಿ(ಜೂ.01): ದೇಶದ ಅಗ್ರ ಕುಸ್ತಿ​ಪ​ಟು​ಗ​ಳಿಂದ ಲೈಂಗಿಕ ಕಿರು​ಕುಳ ಸೇರಿ​ದಂತೆ ಕೆಲ ಗಂಭೀರ ಆರೋ​ಪ​ಗ​ಳಿಗೆ ತುತ್ತಾ​ಗಿ​ರುವ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ಗೆ ಶೀಘ್ರವೇ ದೆಹಲಿ ಪೊಲೀ​ಸರು ಕ್ಲೀನ್‌ ಚಿಟ್‌ ನೀಡ​ಲಿ​ದ್ದಾರೆ ಎಂದು ಪೊಲೀಸ್‌ ಉನ್ನತ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ.

ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದು, ‘ಇನ್ನೂ ತನಿಖೆ ಮುಗಿದಿಲ್ಲ. ಕ್ಲೀನ್‌ ಚಿಟ್‌ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು’ ಎಂದಿದ್ದಾರೆ. ಆದರೂ ಈ ವರೆಗಿನ ತನಿಖೆಯಲ್ಲಿ ಬ್ರಿಜ್‌ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಬ್ರಿಜ್‌​ಭೂ​ಷಣ್‌ ವಿರುದ್ಧ 4 ತಿಂಗಳ ಹಿಂದೆಯೇ ಗಂಭೀರ ಆರೋ​ಪ​ಗ​ಳನ್ನು ಹೊರಿ​ಸಿದ್ದ ಕುಸ್ತಿ​ಪ​ಟು​ಗಳು, ಏ.23ರಿಂದ ಜಂತ​ರ್‌​ಮಂತ​ರ್‌​ನಲ್ಲಿ ಧರ​ಣಿ ಆರಂಭಿ​ಸಿ​ ಹೋರಾಟ ತೀವ್ರ​ಗೊ​ಳಿಸಿದ್ದರು. ಈ ನಡುವೆ ತಿಂಗಳ ಹಿಂದೆಯೇ ಬ್ರಿಜ್‌​ಭೂ​ಷಣ್‌ ವಿರುದ್ಧ ಪೋಕ್ಸೋ ಸೇರಿ​ದಂತೆ 2 ಎಫ್‌​ಐ​ಆರ್‌ ದಾಖ​ಲಿಸಿ ದೆಹಲಿ ಪೊಲೀ​ಸರು ವಿಚಾ​ರಣೆ ಆರಂಭಿ​ಸಿ​ದ್ದರು. ದೂರು ನೀಡಿದ್ದ ಅಪ್ರಾ​ಪ್ತೆ​ಯರ ಹೇಳಿ​ಕೆ​ಗ​ಳನ್ನೂ ದಾಖ​ಲಿ​ಸ​ಲಾ​ಗಿತ್ತು. ಆದರೆ ಈ ವ​ರೆ​ಗಿನ ತನಿ​ಖೆ​ಯಲ್ಲಿ ಆರೋಪ ಸಾಬೀ​ತು​ಪ​ಡಿ​ಸುವ ಯಾವುದೇ ಸಾಕ್ಷ್ಯಾ​ಧಾ​ರ​ಗಳು ಲಭ್ಯ​ವಾ​ಗದ ಹಿನ್ನೆ​ಲೆ​ಯಲ್ಲಿ, ತನಿಖೆ ಮುಕ್ತಾ​ಯ​ಗೊ​ಳಿಸಿ 15 ದಿನಗಳೊಳಗೆ ಕೋರ್ಚ್‌ಗೆ ಅಂತಿಮ ವರದಿ ಸಲ್ಲಿಸುವು​ದಾಗಿ ಪೊಲೀಸ್‌ ಮೂಲ​ಗಳು ತಿಳಿ​ಸಿದ್ದಾಗಿ ವರ​ದಿ​ಯಾ​ಗಿ​ದೆ.

ಕುಸ್ತಿಪಟುಗಳ ಬೇಡಿಕೆ ಈಡೇರದಿದ್ದರೆ ದೆಹಲಿಗೆ ಹಾಲು ತರಕಾರಿ ಪೂರೈಗೆ ಸ್ಥಗಿತ, ನರೇಶ್ ಟಿಕಾಯತ್ ಘೋಷಣೆ!

ವಿನೇಶ್‌, ಭಜರಂಗ್‌ ಮನೆ​ಗೆ

ಏ.23ರಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಾದ ವಿನೇಶ್‌ ಫೋಗಾಟ್‌ ಹಾಗೂ ಭಜರಂಗ್‌ ಪೂನಿಯಾ, ಮಂಗ​ಳ​ವಾರ ಪದಕಗಳನ್ನು ಗಂಗಾ ನದಿಗೆ ಎಸೆ​ಯ​ಲು ಹರಿದ್ವಾರಕ್ಕೆ ತೆರಳಿದ್ದರು. ಪದಕಗಳನ್ನು ಎಸೆಯದೆ ದೆಹಲಿಗೆ ವಾಪಸಾಗಿದ್ದ ಈ ಇಬ್ಬರು ಬುಧ​ವಾರ ಹರ್ಯಾಣದಲ್ಲಿರುವ ತಮ್ಮ ಮನೆಗಳಿಗೆ ಮರ​ಳಿದರು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತೊಬ್ಬ ಕುಸ್ತಿಪಟು ಸಾಕ್ಷಿ ಮಲಿಕ್‌ ಇನ್ನೂ ದೆಹಲಿಯಲ್ಲೇ ಇರುವುದಾಗಿ ತಿಳಿದುಬಂದಿದೆ.

ದುಡು​ಕ​ಬೇಡಿ, ಕಾಯಿ​ರಿ: ಕ್ರೀಡಾ ಸಚಿ​ವ ಠಾಕೂ​ರ್‌

ಪ್ರಕ​ರ​ಣದ ಬಗ್ಗೆ ಮೌನ ಮುರಿ​ದಿ​ರುವ ಕೇಂದ್ರ ಕ್ರೀಡಾ ಸಚಿವ ಅನು​ರಾಗ್‌ ಠಾಕೂರ್‌, ‘ಪೊಲೀಸರು ತನಿಖೆ ನಡೆ​ಸು​ತ್ತಿ​ದ್ದಾರೆ. ಅದು​ವ​ರೆಗೂ ಕ್ರೀಡೆ ಹಾಗೂ ಕ್ರೀಡಾ​ಳು​ಗ​ಳಿಗೆ ತೊಂದ​ರೆ​ಯಾ​ಗುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ’ ಎಂದು ಕುಸ್ತಿಪಟುಗಳಿಗೆ ಮನವಿ ಮಾಡಿ​ದ್ದಾ​ರೆ. ‘ಪೊ​ಲೀ​ಸ​ರ ತನಿ​ಖೆ​ಯಲ್ಲಿ ನಂಬಿಕೆ ಇಡಿ, ನಾವೂ ನಿಮ್ಮ ಜೊತೆ​ಗಿ​ದ್ದೇವೆ. ಆರೋಪ ಸಾಬೀ​ತಾ​ದರೆ ಕಠಿಣ ಶಿಕ್ಷೆ ನೀಡು​ತ್ತೇವೆ. ಕ್ರೀಡೆ​ಗಾಗಿ ಸರ್ಕಾರ ಸಾಕಷ್ಟುಶ್ರಮ ವಹಿ​ಸು​ತ್ತಿದೆ’ ಎಂದಿ​ದ್ದಾರೆ.

ಆರೋಪ ಸಾಬೀತಾದರೆ ನೇಣಿಗೆ: ಬ್ರಿಜ್‌ ಸವಾ​ಲು

ತಮ್ಮ ವಿರುದ್ಧದ ಎಲ್ಲಾ ಆರೋ​ಪ​ಗ​ಳನ್ನು ನಿರಾ​ಕ​ರಿ​ಸು​ತ್ತಿ​ರುವ ಡಬ್ಲ್ಯು​ಎ​ಫ್‌ಐ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌, ಒಂದೇ ಒಂದು ಆರೋಪ ಸಾಬೀತಾದರೂ ಸ್ವತಃ ತಾವೇ ನೇಣಿ​ಗೇ​ರು​ವು​ದಾಗಿ ಮತ್ತೊಮ್ಮೆ ಸವಾಲು ಹಾಕಿ​ದ್ದಾರೆ. ಈ ಬಗ್ಗೆ ಸಾರ್ವಜನಿಕ ಕಾರ‍್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಕುಸ್ತಿ​ಪ​ಟು​ಗಳು ಹೋರಾಟ ಆರಂಭಿಸಿ 4 ತಿಂಗ​ಳಾ​ಯಿತು. ಆದರೆ ಆರೋಪ ಸಾಬೀತು ಪಡಿ​ಸಲು ಸಾಧ್ಯ​ವಾ​ಗಿಲ್ಲ. ಅವ​ರಲ್ಲಿ ಸಾಕ್ಷ್ಯಾ​ಧಾ​ರ​ಗ​ಳಿ​ದ್ದರೆ ನ್ಯಾಯಾ​ಲ​ಯದಲ್ಲಿ ಸಾಬೀ​ತು​ಪ​ಡಿ​ಸಲಿ. ನಾನು ಯಾವುದೇ ಶಿಕ್ಷೆಗೂ ಸಿದ್ಧ. ಅದನ್ನು ಬಿಟ್ಟು ಗಂಗಾ ನದಿಗೆ ಪದಕ ಎಸೆ​ಯು​ವು​ದ​ರಿಂದ ನನ್ನ ವಿರು​ದ್ಧದ ಆರೋಪ ಸಾಬೀ​ತು​ಪ​ಡಿ​ಸಲು ಸಾಧ್ಯವಿಲ್ಲ’ ಎಂದಿದ್ದಾರೆ.

Follow Us:
Download App:
  • android
  • ios