Asianet Suvarna News Asianet Suvarna News

ಬ್ರಿಜ್‌ಭೂಷಣ್ ವಿರುದ್ದ ಕುಸ್ತಿಪಟುಗಳಿಂದ ಮತ್ತೆ ಪ್ರತಿಭಟನೆ..!

* ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ಗೆ ಕ್ಲೀನ್‌ಚಿಟ್
* ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್
* ದೆಹಲಿಯ ಜಂತರ್‌ ಮಂತರ್‌ನಲ್ಲಿ ಮತ್ತೆ ಕುಸ್ತಿಪಟುಗಳ ಪ್ರತಿಭಟನೆ

Wrestlers continue protest for justice against WFI president Brij Bhushan Sharan Singh kvn
Author
First Published Apr 24, 2023, 10:29 AM IST | Last Updated Apr 24, 2023, 10:29 AM IST

ನವ​ದೆ​ಹ​ಲಿ(ಏ.24): ಲೈಂಗಿಕ ಕಿರು​ಕುಳ ಸೇರಿ​ ಹಲವು ಗಂಭೀರ ಪ್ರಕ​ರ​ಣ​ಗ​ಳಿಗೆ ಸಂಬಂಧಿ​ಸಿ​ದಂತೆ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌(ಡ​ಬ್ಲ್ಯು​ಎ​ಫ್‌​ಐ) ಮಾಜಿ ಅಧ್ಯ​ಕ್ಷ ಬ್ರಿಜ್‌​ಭೂ​ಷಣ್‌ ವಿರು​ದ್ಧ ಯಾವುದೇ ಕ್ರಮ ಕೈಗೊ​ಳ್ಳದ ಕಾರಣ ಹಾಗೂ ಮೇರಿ ಕೋಮ್‌ ನೇತೃ​ತ್ವದ ಸಮಿತಿಯು ಕ್ರೀಡಾ ಸಚಿ​ವಾ​ಲ​ಯಕ್ಕೆ ನೀಡಿದ್ದ ವರ​ದಿ​ಯನ್ನು ಬಹಿ​ರಂಗ​ಪ​ಡಿ​ಸುವಂತೆ ಆಗ್ರ​ಹಿ​ಸಿ ದೇಶದ ಅಗ್ರ ಕುಸ್ತಿ​ಪ​ಟು​ಗಳು ನವ​ದೆ​ಹ​ಲಿಯ ಜಂತರ್‌ ಮಂತ​ರ್‌​ನಲ್ಲಿ ಮತ್ತೆ ಧರಣಿ ಆರಂಭಿ​ಸಿ​ದ್ದಾರೆ.

ಭಾರತದ ಅಗ್ರಕುಸ್ತಿಪಟುಗಳಾದ ಒಲಿಂಪಿಕ್ ಪದಕ ವಿಜೇತರಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್‌, ವಿನೇಶ್ ಪೋಗಾಟ್ ಸೇರಿದಂತೆ ಹಲವು ಕುಸ್ತಿಪಟುಗಳು ತಮ್ಮ ಪ್ರತಿಭಟನೆ ಮತ್ತೊಮ್ಮೆ ಪುನರಾರಂಭಿಸಿದ್ದಾರೆ.

ಜನ​ವರಿ ಅಂತ್ಯ​ದಲ್ಲೇ ತನಿಖೆ ಆರಂಭಿ​ಸಿದ್ದ ಸಮಿ​ತಿಯು ಇತ್ತೀ​ಚೆ​ಗಷ್ಟೇ ವರದಿ ಸಲ್ಲಿ​ಸಿತ್ತು. ಆದರೆ ಭೂಷ​ಣ್‌​ರಿಂದ ಕಿರು​ಕು​ಳ​ವಾದ ಬಗ್ಗೆ ವರ​ದಿ​ಯಲ್ಲಿ ಯಾವುದೇ ಉಲ್ಲೇ​ಖ​ವಿಲ್ಲ ಮತ್ತು ಅವರಿಗೆ ಕ್ಲೀನ್‌​ಚಿಟ್‌ ಸಿಗ​ಲಿದೆ ಎಂದು ವರ​ದಿ​ಯಾ​ಗಿ​ತ್ತು. ಹೀಗಾಗಿ ಶುಕ್ರ​ವಾರ ಕುನಾಟ್‌ನಲ್ಲಿ​ರುವ ಪೊಲೀಸ್‌ ಠಾಣೆಗೆ ದೂರು ಸಲ್ಲಿ​ಸಿದ ಕುಸ್ತಿ​ಪ​ಟು​ಗಳು, ಭಾನು​ವಾರ ಜಂತ​ರ್‌​ಮಂತ​ರ್‌ಗೆ ಆಗ​ಮಿಸಿ ಧರಣಿ ಕುಳಿ​ತಿ​ದ್ದಾರೆ. ‘ಅಪ್ರಾಪ್ತ ಕುಸ್ತಿ​ಪಟು ಸೇರಿ​ದಂತೆ 7 ಮಂದಿ ಸೇರಿ ಪೊಲೀ​ಸರಿಗೆ ದೂರು ಸಲ್ಲಿ​ಸಿ​ದ್ದೇವೆ. ಆದರೆ ಪ್ರಕ​ರ​ಣ​ವನ್ನೂ ಯಾರೂ ಗಂಭೀ​ರ​ವಾಗಿ ಪರಿ​ಗ​ಣಿ​ಸು​ತ್ತಿಲ್ಲ. ಹೀಗಾಗಿ ಮತ್ತೆ ಧರಣಿ ಶುರು​ಮಾ​ಡಿ​ದ್ದೇವೆ. ನ್ಯಾಯ ಸಿಗು​ವ​ವ​ರೆಗೂ ಇಲ್ಲಿಂದ ಕದ​ಲು​ವು​ದಿಲ್ಲ’ ಎಂದು ಕುಸ್ತಿ​ಪಟು ಸಾಕ್ಷಿ ಮಲಿಕ್‌ ಎಚ್ಚ​ರಿ​ಸಿ​ದ್ದಾರೆ.

ಇನ್ನು, ಪೊಲೀಸರಿಗೆ ದೂರು ಸಲ್ಲಿ​ಸಿ 2 ದಿನ​ಗ​ಳಾ​ದರೂ ಇನ್ನೂ ಎಫ್‌​ಐ​ಆರ್‌ ದಾಖ​ಲಿ​ಸಿ​ದ್ದಕ್ಕೆ ದೆಹಲಿ ಮಹಿಳಾ ಆಯೋಗ ಕಿಡಿ​ಕಾ​ರಿದ್ದು, ದೆಹಲಿ ಪೊಲೀ​ಸ​ರಿಗೆ ನೋಟಿಸ್‌ ಜಾರಿ ಮಾಡಿ​ದೆ.

ಆರ್ಚರಿ ವಿಶ್ವಕಪ್‌: ಭಾರ​ತ ರೀಕರ್ವ್‌ ತಂಡಕ್ಕೆ ಬೆಳ್ಳಿ

ಅಂತಾಲ್ಯ(ಟರ್ಕಿ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ ಮೊದಲ ಹಂತದಲ್ಲಿ ಭಾರತದ ಪುರು​ಷರ ರೀಕರ್ವ್‌ ತಂಡ ಬೆಳ್ಳಿ ಪದಕ ಗೆದ್ದು​ಕೊಂಡಿದ್ದು, 13 ವರ್ಷ​ಗಳ ಬಳಿಕ ಚಿನ್ನ ತನ್ನ​ದಾ​ಗಿ​ಸಿ​ಕೊ​ಳ್ಳುವ ಅವ​ಕಾಶ ತಪ್ಪಿ​ಸಿ​ಕೊಂಡಿತು. ಭಾನು​ವಾರ ತರು​ಣ್‌​ದೀಪ್‌, ಅತನು ದಾಸ್‌, ಧೀರಜ್‌ ಅವ​ರ​ನ್ನೊ​ಳ​ಗೊಂಡ ತಂಡ ಫೈನ​ಲ್‌​ನಲ್ಲಿ ಚೀನಾ ವಿರು​ದ್ಧ 4-5 ಅಂತ​ರ​ದಲ್ಲಿ ಸೋಲ​ನು​ಭ​ವಿ​ಸಿತು. 

IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!

ಭಾರತ ಪುರು​ಷರ ರೀಕರ್ವ್‌ ತಂಡ ಕೊನೆ ಬಾರಿ ಚಿನ್ನ ಗೆದ್ದಿದ್ದು 2010ರಲ್ಲಿ. ಬಳಿಕ 2014ರಲ್ಲಿ ಬೆಳ್ಳಿ ಜಯಿ​ಸಿದ್ದ ಭಾರತ 9 ವರ್ಷ​ಗಳ ಬಳಿಕ ಮೊದಲ ಸಲ ಫೈನ​ಲ್‌​ಗೇ​ರಿತ್ತು. ಇದೇ ವೇಳೆ ವೈಯ​ಕ್ತಿಕ ರೀಕರ್ವ್‌ ವಿಭಾ​ಗ​ದಲ್ಲಿ ಧೀರಜ್‌ ಕಂಚಿನ ಪದಕ ತಮ್ಮ​ದಾ​ಗಿ​ಸಿ​ಕೊಂಡರು. ಈ ಬಾರಿ ಟೂರ್ನಿ​ಯಲ್ಲಿ ಭಾರತ ಒಟ್ಟು 2 ಚಿನ್ನ ಸೇರಿ 4 ಪದಕ ಗೆದ್ದು​ಕೊಂಡಿದೆ. ಶನಿ​ವಾರ ಮಿಶ್ರ ಕಾಂಪೌಂಡ್‌ ಹಾಗೂ ಮಹಿಳೆಯರ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ಭಾರ​ತಕ್ಕೆ ಚಿನ್ನ ಒಲಿ​ದಿ​ತ್ತು.

Latest Videos
Follow Us:
Download App:
  • android
  • ios