ಮುಂಬೈ(ಏ.15):  ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟವಾದ ಬೆನ್ನಲ್ಲೇ ಚರ್ಚೆಗಳು ಆರಂಭಗೊಂಡಿದೆ. ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿರುವು ಆಯ್ಕೆ ಸಮಿತಿ ನಿರಾಳವಾಗಿದೆ. ಕಳೆದೊಂದು ವರ್ಷದಿಂದ ಭಾರತದ ಎಲ್ಲಾ ಆಟಗಾರರ ಮೇಲೆ ಕಣ್ಣಿಟ್ಟಿದ್ದ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಿದೆ.  15 ಸದಸ್ಯರ ಟೀಂ ಇಂಡಿಯಾ ತಂಡ ಯಾಕೆ ಬಲಿಷ್ಠವಾಗಿದೆ ಅನ್ನೋದು ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್

ವಿರಾಟ್ ಕೊಹ್ಲಿ:
2011, 2015ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ನಾಯಕನಾಗಿ ವಿಶ್ವಕಪ್ ಟೂರ್ನಿ ಆಡಲಿದ್ದಾರೆ.

ರೋಹಿತ್ ಶರ್ಮಾ:
2015ರ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಸ್ಫೋಟಕ ಆರಂಭಿಕ ರೋಹಿತ್ ಶರ್ಮಾ ಇದೀಗ 2019ರಲ್ಲಿ ಟೀಂ ಇಂಡಿಯಾ ಪರ ಪ್ರಮುಖ ಪಾತ್ರವಹಿಸಲಿದ್ದಾರೆ. 

ಶಿಖರ್ ಧವನ್:
ವಿಶ್ವಕಪ್ ಆಡಿದ ಅನುಭವವಿರುವ ಶಿಖರ್ ಧವನ್ , ಫಾರ್ಮ್‌ಗೆ ಮರಳಿದ್ದಾರೆ. ಇದು ಟೀಂ ಇಂಡಿಯಾಗೆ ಸಹಕಾರಿಯಾಗಲಿದೆ.

ಕೆಎಲ್ ರಾಹುಲ್:
2019ರ ವಿಶ್ವಕಪ್ ತಂಡದಲ್ಲಿರುವ ಏಕೈಕ ಕನ್ನಡಿಗ ಕೆಎಲ್ ರಾಹುಲ್. ಆರಂಭಿಕನಾಗಿ, ಮಧ್ಯಮ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಎಂ.ಎಸ್.ಧೋನಿ:
2011 ಹಾಗೂ 2015ರ ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಹಾಗೂ 2007ರ ವಿಶ್ವಕಪ್ ಟೂರ್ನಿಯಲ್ಲಿ ತಂಡದ  ಸದಸ್ಯನಾಗಿ ಆಡಿರುವ ಎಂ.ಎಸ್.ಧೋನಿ ಅನುಭವ ನಾಯಕ ಕೊಹ್ಲಿಗೆ ನೆರವಾಗಲಿದೆ.

ವಿಜಯ್ ಶಂಕರ್:
28ರ ಹರೆಯದ ತಮಿಳುನಾಡು ಆಲ್ರೌಂಡರ್ ವಿಜಯ್ ಶಂಕರ್ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದಾರೆ. 

ಕೇದಾರ್ ಜಾಧವ್:
ಟೀಂ ಇಂಡಿಯಾದ ಫಿನೀಶಿಂಗ್ ಜವಾಬ್ದಾರಿ ಹೊತ್ತಿರುವ ಕೇದಾರ್ ಜಾಧವ್, ಈ ಭಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮಹತ್ತರ ಪಾತ್ರ ನಿರ್ವಹಸಲಿದ್ದಾರೆ.

ದಿನೇಶ್ ಕಾರ್ತಿಕ್:
ಎಂ.ಎಸ್.ಧೋನಿ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ರಿಷಬ್ ಪಂತ್ ಬದಲು ಆಯ್ಕೆ ಸಮಿತಿ ಕಾರ್ತಿಕ್ ಮೇಲೆ ನಂಬಿಕೆ ಇಟ್ಟಿದೆ.

ಹಾರ್ದಿಕ್ ಪಾಂಡ್ಯ:
ಫಾಸ್ಟ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ಕೀ ಪ್ಲೇಯರ್. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಪಾಂಡ್ಯ ನೆರವಾಗುತ್ತಾರೆ.

ರವೀಂದ್ರ ಜಡೇಜಾ:
ಸ್ಪಿನ್ ಅಲ್ರೌಂಡರ್ ಜಡೇಜಾ 2015ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಫೀಲ್ಡಿಂಗ್‌ನಲ್ಲೂ ರವೀಂದ್ರ ಜಡೇಜಾ ಮಿಂಚಿನ ಪ್ರದರ್ಶನ ನೀಡುತ್ತಾರೆ.

ಯಜುವೇಂದ್ರ ಚೆಹಾಲ್:
ಟೀಂ ಇಂಡಿಯಾದ ಸ್ಪಿನ್ ವಿಭಾಗದಲ್ಲಿ ಮೋಡಿ ಮಾಡುತ್ತಿರುವ ಯಜುವೇಂದ್ರ ಚೆಹಾಲ್ ಚೊಚ್ಚಲ ವಿಶ್ವಕಪ್ ಟೂರ್ನಿ ಆಡಲು ಸಜ್ಜಾಗಿದ್ದಾರೆ.

ಕುಲ್ದೀಪ್ ಯಾದವ್:
ಚಹಾಲ್ ಹಾಗೂ ಕುಲ್ದೀಪ್ ಯಾದವ್ ಜೋಡಿ ಎದುರಾಳಿಗಳ ಆರ್ಭಟಕ್ಕೆ ಬ್ರೇಕ್ ಹಾಕುವಲ್ಲಿ ಪ್ರತಿ ಭಾರಿ ಯಶಸ್ವಿಯಾಗಿದೆ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಸ್ಪಿನ್ ಜಾದೂ ಮುಂದುವರಿಸೋ ವಿಶ್ವಾಸದಲ್ಲಿದೆ.

ಜಸ್ಪ್ರೀತ್ ಬುಮ್ರಾ:
ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ಫ್ರಂಟ್ ಲೈನ್ ವೇಗಿ. ಅದ್ಬುತ ಬೌಲಿಂಗ್ ದಾಳಿ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿರುವ ಬುಮ್ರಾ, ಟೀಂ ಇಂಡಿಯಾ ಯಶಸ್ಸಿನ ಹಿಂದಿನ ಶಕ್ತಿ.

ಭುವನೇಶ್ವರ್ ಕುಮಾರ್:
ಸ್ವಿಂಗ್ ಮೂಲಕ ಎದುರಾಳಿಗನ್ನು ಕಟ್ಟಿ ಹಾಗೂ ಭುವಿ, ಡೆತ್ ಓವರ್‌ನಲ್ಲೂ ಅದ್ಬುತ ದಾಳಿ ಸಂಘಟಿಸೋ ಸಾಮರ್ಥ್ಯ ಹೊಂದಿದ್ದಾರೆ.

ಮೊಹಮ್ಮದ್ ಶಮಿ:
ಲೈನ್ ಅಂಡ್ ಲೆಂಥ್ ಜೊತೆ ವೇಗ ಇದೇ ಮೊಹಮ್ಮದ್ ಶಮಿ ವಿಶೇಷತೆ. ಇಂಗ್ಲೆಂಡ್ ಕಂಡೀಷನ್‌ನಲ್ಲಿ ಶಮಿ ಪರಿಣಾಮಕಾರಿಯಾಗಬಲ್ಲರು.