ವಿಶ್ವ ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಭಾರತದ ಮೇರಿ ಕೋಮ್ ಫೈನಲ್ ಪ್ರವೇಶಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನದ ಪದಕ ತರುವು ವಿಶ್ವಾಸದಲ್ಲಿದ್ದಾರೆ. ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಮೇರಿ ಹೋರಾಟದ ಹೈಲೈಟ್ಸ್ ಇಲ್ಲಿದೆ.
ನವದೆಹಲಿ(ನ.23): ಭಾರತದ ತಾರಾ ಬಾಕ್ಸರ್ ಮೇರಿ ಕೋಮ್, ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 48 ಕೆ.ಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಮೇರಿಗೆ 6ನೇ ಚಿನ್ನ ಗೆಲ್ಲಲು ಇನ್ನೊಂದು ಮೆಟ್ಟಿಲು ಬಾಕಿ ಇದೆ.
ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಮೇರಿ, ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು. ಕನಿಷ್ಠ ಬೆಳ್ಳಿ ಪದಕ ಖಚಿತ ಪಡಿಸಿಕೊಂಡಿರುವ ಮೇರಿಗೆ 2010ರ ಬಳಿಕ ದೊರೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಪದಕವಿದು.
ಇದೇ ವೇಳೆ 69 ಕೆ.ಜಿ ವಿಭಾಗದ ಸೆಮೀಸ್‌ನಲ್ಲಿ ಭಾರತದ ಲೊವ್ಲಿನಾ, ಚೈನೀಸ್ ತೈಪೆಯ ಚೆನ್ ನೀನ್ ವಿರುದ್ಧ ಸೋಲುಂಡು ಕಂಚಿಗೆ ತೃಪ್ತಿಪಟ್ಟರು. ಶುಕ್ರವಾರದ ಸೆಮೀಸ್‌ನಲ್ಲಿ ಸಿಮ್ರನ್‌ಜಿತ್, ಸೋನಿಯ ಕಣಕ್ಕಿಳಿಯಲಿದ್ದಾರೆ.
