Asianet Suvarna News Asianet Suvarna News

ಕ್ರಿಕೆಟ್‌..ಬ್ಯಾಡ್ಮಿಂಟನ್‌ ಯಾವ್ದೂ ಅಲ್ಲ, ವರ್ಲ್ಡ್‌ ಸ್ಕೇಟ್‌ ಗೇಮ್‌ನಲ್ಲಿ ಇತಿಹಾಸ ಬರೆದ ಭಾರತ, ಆದ್ರೆ ಶುಭ ಕೋರುವವರೇ ಇಲ್ಲ!

ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟ್ ಗೇಮ್ಸ್ 2024 ರಲ್ಲಿ ಭಾರತದ ಮಹಿಳಾ ರೋಲರ್ ಡರ್ಬಿ ತಂಡವು ಕಂಚಿನ ಪದಕ ಗೆದ್ದಿದೆ. ಚೀನಾ ವಿರುದ್ಧದ ಪಂದ್ಯದಲ್ಲಿ ಭಾರತ 127-39 ಅಂತರದಲ್ಲಿ ಗೆಲುವು ಸಾಧಿಸಿತು. ಪುರುಷರ ತಂಡ ಪದಕ ಗೆಲ್ಲುವಲ್ಲಿ ವಿಫಲವಾಯಿತು.

World Skate Games Indian women roller derby team win a historic Bronze medal san
Author
First Published Sep 24, 2024, 6:55 PM IST | Last Updated Sep 24, 2024, 6:56 PM IST

ನವದೆಹಲಿ (ಸೆ.24): ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟ್ ಗೇಮ್ಸ್ 2024 ರಲ್ಲಿ ಭಾರತದ ಮಹಿಳಾ ರೋಲರ್ ಡರ್ಬಿ ತಂಡವು ದೇಶಕ್ಕೆ ಮೊದಲ ಪದಕವನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದೆ. ಶ್ರುತಿಕಾ ಸರೋದೆ ನೇತೃತ್ವದ ಭಾರತ ತಂಡವು ಮಹಿಳಾ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಚೀನಾ ವಿರುದ್ಧ ಅದ್ಭುತ ಪ್ರದರ್ಶನ ನೀಡಗ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ನೀಡಿದ ಪದಕವನ್ನು ತನ್ನದಾಗಿಸಿಕೊಂಡಿತು.  ರೋಲರ್ ಡರ್ಬಿಯಲ್ಲಿ ವರ್ಲ್ಡ್ ಸ್ಕೇಟ್ ಗೇಮ್ಸ್‌ನಲ್ಲಿ 2ನೇ ಬಾರಿಗೆ ಮುಖಾಮುಖಿಯಾದ ಎರಡೂ ತಂಡಗಳು ತಮ್ಮ ಪ್ರಾಥಮಿಕ ಪಂದ್ಯಗಳ ಉದ್ದಕ್ಕೂ ಉತ್ತಮ ಸುಧಾರಣೆಗಳನ್ನು ತೋರಿಸಿದವು, ತಮ್ಮ ಫೈನಲ್‌ನ ಪ್ರಾರಂಭದಲ್ಲಿ ಸಮವಾಗಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ್ದರು.  ಆದರೆ, ಪಂದ್ಯ ಮುಕ್ತಾಯದ ವೇಳೆಗೆ ಭಾರತ 127 ರಿಂದ 39 ಸ್ಕೋರ್‌ನೊಂದಿಗೆ ಗೆಲುವು ಕಂಡಿತು. ಆ ಮೂಲಕ ಭಾರತಐತಿಹಾಸಿಕ ವಿಜಯವನ್ನು ಸಾಧಿಸಿತು.

ಭಾರತದ ಜಾಮರ್‌ಗಳನ್ನು ತಡೆಯುವುದು ಚೀನಾ ಆಟಗಾರ್ತಿಯರಿಗೆ ಸುಲಭವಾಗಿರಲಿಲ್ಲ. ಚೀನಾದ ಪ್ರತಿ ರಕ್ಷಣಾತ್ಮಕ ಲೋಪವನ್ನು ಭಾರತ ಬಳಕೆ ಮಾಡಿಕೊಂಡಿತು. ಮಿಂಚಿನ ವೇಗದ ಪಾಸ್‌ಗಳೊಂದಿಗೆ ಪಾಯಿಂಟ್‌ಗಳನ್ನು ಗಳಿಸಿದರು. ಚೀನಾದ ರಕ್ಷಣೆಯು ಭಾರತದ ಬಿರುಸಿನ ವೇಗ ಮತ್ತು ಚುರುಕುತನದ ಎದುರು ಮಂಕಾಯಿತು. ಭಾರತದ ಕಲ್ಲು ಬಂಡೆಯಂಥ ರಕ್ಷಣಾತ್ಮಕ ಫಾರ್ಮಟ್‌ಅನ್ನು ಬೇಧಿಸಿ ಅಂಕ ಗಳಿಸುವುದು ಚೀನಾದ ಜಾಮರ್‌ಗಳಿಗೆ ಸುಲಭವಾಗಿರಲಿಲ್ಲ. ಪ್ರತಿ ಅಂಕಕ್ಕೂ ಚೀನಾ ಪರದಾಡುವಂತಾಯಿತು. ತಮ್ಮ ಅಮೋಘ ವಿಜಯದ ಮೇಲೆ ಸವಾರಿ ಮಾಡಿದ ಭಾರತ ತಂಡವು ಕಂಚಿನ ಪದಕದ ಗೆಲುವು ಕಂಡಿತು.

ವಿರಾಟ್ ಕೊಹ್ಲಿ ಯಾಕೆ ಐಪಿಎಲ್ ಹರಾಜಿಗೆ ಬರ್ತಿಲ್ಲ? ಅಷ್ಟಕ್ಕೂ ಆರ್‌ಸಿಬಿಗೂ, ಕೊಹ್ಲಿಗೂ ಏನು ಸಂಬಂಧ?

ಪದಕ ವೇದಿಕೆ ಏರಲು ಮಿಸ್‌ ಆದ ಪುರುಷರ ತಂಡ: ಮಹಿಳಾ ತಂಡದ ಪ್ರದರ್ಶನಕ್ಕೆ ವ್ಯತಿರಿಕ್ತವಾಗಿ, ಭಾರತದ ಪುರುಷರ ತಂಡವು 75-119 ರಿಂದ ಚೀನಾಕ್ಕೆ ಶರಣಾಗುವ ಮೂಲಕ ಪದಕದಿಂದ ವಂಚಿತವಾಯಿತು.

ಟೀಂ ಇಂಡಿಯಾದ ಟಾಪ್ 4 ಫೀಲ್ಡರ್ಸ್ ಯಾರು? ಕೋಚ್ ಟಿ ದಿಲೀಪ್ ಹೇಳಿದ ಸೀಕ್ರೆಟ್!

Latest Videos
Follow Us:
Download App:
  • android
  • ios