ಅನೂಪ್ ಕುಮಾರ್ ನೇತೃತ್ವದ ಭಾರತ ಕಬಡ್ಡಿ ತಂಡ ಪ್ರಶಸ್ತಿ ಸುತ್ತಿನಲ್ಲಿ 38-29 ಅಂಕಗಳಿಂದ ಇರಾನ್ ಎದುರು ಗೆಲುವು ಸಾಧಿಸಿ ಸತತ 3ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು.
ನವದೆಹಲಿ(ನ.03): ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆದ್ದ ಭಾರತ ತಂಡದ ಆಟಗಾರರಿಗೆ ತಲಾ 10 ಲಕ್ಷ ಬಹುಮಾನವನ್ನು ಸರ್ಕಾರದ ಪರವಾಗಿ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಹೇಳಿದ್ದಾರೆ.
ಅನೂಪ್ ಕುಮಾರ್ ನೇತೃತ್ವದ ಭಾರತ ಕಬಡ್ಡಿ ತಂಡ ಪ್ರಶಸ್ತಿ ಸುತ್ತಿನಲ್ಲಿ 38-29 ಅಂಕಗಳಿಂದ ಇರಾನ್ ಎದುರು ಗೆಲುವು ಸಾಧಿಸಿ ಸತತ 3ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಆದರೆ, ಕಬಡ್ಡಿ ಆಟಗಾರರನ್ನು ನಿರ್ಲಕ್ಷಿಸಲಾಗಿದೆ ಎಂದು ಅನೂಪ್ ಬೇಸರ ತೋಡಿಕೊಂಡಿದ್ದರು.
ಇನ್ನು ಆಟಗಾರರಂತೆ, ಕೋಚ್ ಕೂಡ ಬಹುಮಾನ ಮೊತ್ತ ಪಡೆಯಲಿದ್ದಾರೆ. ದೇಶಿಯ ಕ್ರೀಡೆಯಾದ ಕಬಡ್ಡಿಯನ್ನು ಒಲಿಂಪಿಕ್ಸ್ ಕೂಟದಲ್ಲಿ ಸೇರಿಸುವತ್ತ ಚಿಂತಿಸಲಾಗುತ್ತಿದೆ ಎಂದು ಸಚಿವರಾದ ಗೋಯೆಲ್ ತಿಳಿಸಿದ್ದಾರೆ.
