ವಿಶ್ವಕಪ್ ಫುಟ್ಬಾಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಏಕೈಕ ಫುಟ್ಬಾಲ್ ಪಟುವೆನಿಸಿರುವ ಮಿರೋಸ್ಲಾವ್, ಎರಡು ವರ್ಷಗಳ ಹಿಂದೆ ಬ್ರೆಜಿಲ್‌ನಲ್ಲಿ ನಡೆದ 2014ರ ವಿಶ್ವಕಪ್ ಫುಟ್ಬಾಲ್ ಸೆಮಿಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ 7-1 ಗೋಲುಗಳ ಅಭೂತಪೂರ್ವ ಗೆಲುವು ಸಾಧಿಸಿದ್ದ ಜರ್ಮನಿ ಪರ 23ನೇ ನಿಮಿಷದಲ್ಲಿ ಗೋಲು ಬಾರಿಸಿ ಮಾಜಿ ಆಟಗಾರ ಬ್ರೆಜಿಲ್‌ನ ರೊನಾಲ್ಡೊ (15) ಅವರ ಸಾಧನೆಯನ್ನು ಹಿಂದಿಕ್ಕಿದ್ದರು.
ಬರ್ಲಿನ್(ನ.01): ಜರ್ಮನಿ ಫುಟ್ಬಾಲ್ ತಂಡದ ಸ್ಟಾರ್ ಸ್ಟ್ರೈಕರ್, 38 ವರ್ಷದ ಮಿರೋಸ್ಲಾವ್ ಕ್ಲೋಸ್ ವೃತ್ತಿಬದುಕಿಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.
ವಿಶ್ವಕಪ್ ಫುಟ್ಬಾಲ್ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಏಕೈಕ ಫುಟ್ಬಾಲ್ ಪಟುವೆನಿಸಿರುವ ಮಿರೋಸ್ಲಾವ್, ಎರಡು ವರ್ಷಗಳ ಹಿಂದೆ ಬ್ರೆಜಿಲ್ನಲ್ಲಿ ನಡೆದ 2014ರ ವಿಶ್ವಕಪ್ ಫುಟ್ಬಾಲ್ ಸೆಮಿಫೈನಲ್ನಲ್ಲಿ ಬ್ರೆಜಿಲ್ ವಿರುದ್ಧ 7-1 ಗೋಲುಗಳ ಅಭೂತಪೂರ್ವ ಗೆಲುವು ಸಾಧಿಸಿದ್ದ ಜರ್ಮನಿ ಪರ 23ನೇ ನಿಮಿಷದಲ್ಲಿ ಗೋಲು ಬಾರಿಸಿ ಮಾಜಿ ಆಟಗಾರ ಬ್ರೆಜಿಲ್ನ ರೊನಾಲ್ಡೊ (15) ಅವರ ಸಾಧನೆಯನ್ನು ಹಿಂದಿಕ್ಕಿದ್ದರು.
ಜರ್ಮನಿ ಪರ 137 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 71 ಗೋಲು ದಾಖಲಿಸಿರುವ ಕ್ಲೋಸ್, 2014ರ ವಿಶ್ವಕಪ್ ಗೆಲ್ಲುತ್ತಲೇ ವೃತ್ತಿಬದುಕಿಗೆ ವಿದಾಯ ಹೇಳಿದ್ದರು. ಕಳೆದ ವರ್ಷವಷ್ಟೇ ಅವರ ಹಾಗೂ ಲಾಜಿಸೋ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡಿತ್ತು. ಶೀಘ್ರದಲ್ಲೇ ಜರ್ಮನಿ ರಾಷ್ಟ್ರೀಯ ತಂಡದ ತರಬೇತುದಾರರ ತಂಡವನ್ನು ಸೇರ್ಪಡೆಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ.
