’ನೋ ಟು ರಷ್ಯನ್ ಗರ್ಲ್ಸ್’: ನೈಜಿರಿಯಾ ಫುಟ್ಬಾಲ್ ಕೋಚ್..!

sports | Tuesday, May 29th, 2018
Suvarna Web Desk
Highlights

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ. ತಮ್ಮ ತಮ್ಮ ನೆಚ್ಚಿನ ತಂಡಗಳನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವೆ ಟೂರ್ನಿಯಲ್ಲಿ ಭಾಗವಹಿಸಲಿರುವ ತಂಡಗಳಿಗೆ ಕೋಚ್ ಗಳು ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಕಡ್ಡಾಯ ಮಾಡಿದ್ದಾರೆ.

ಮಾಸ್ಕೋ(ಮೇ 29): ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ. ತಮ್ಮ ತಮ್ಮ ನೆಚ್ಚಿನ ತಂಡಗಳನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವೆ ಟೂರ್ನಿಯಲ್ಲಿ ಭಾಗವಹಿಸಲಿರುವ ತಂಡಗಳಿಗೆ ಕೋಚ್ ಗಳು ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಕಡ್ಡಾಯ ಮಾಡಿದ್ದಾರೆ.

ಆಟಗಾರರ ಗಮನವೆಲ್ಲಾ ಪಂದ್ಯ ಗೆಲ್ಲುವುದರಲ್ಲಿ ಇರಬೇಕು, ಉತ್ತಮ ಪ್ರದರ್ಶನ ತೋರುವ ಆಲೋಚನೆ ಬಿಟ್ಟು ಬೇರೆ ಯಾವುದೇ ಯೋಚನೆ ಬರಬಾರದು ಎಂದು ಕೋಚ್ ಗಳು ತಮ್ಮ ತಮ್ಮ ತಂಡದ ಆಟಗಾರರಿಗೆ ಕಿವಿಮಾತು ಹೇಳುತ್ತಿದ್ದಾರೆ. ಅದರಲ್ಲೂ ನೈಜೀರಿಯಾ ತಂಡದ ಕೋಚ್ ಜೆನಾರ್ಟ್ ರೊಹ್ರ್, ಯಾವುದೇ ಕಾರಣಕ್ಕೂ ಆಟಗಾರರು ಅತಿಥೇಯ ರಷ್ಯಾ ದೇಶದ ಹುಡುಗಿಯರ ಜತೆ ತಿರುಗಾಡುವಂತಿಲ್ಲ ಎಂದು ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. 

ವಿಶ್ವಕಪ್ ವೇಳೆ ನೈಜೀರಿಯಾ ತಂಡ ಸ್ಟಾಮ್ರೊಪೊಲ್ಕ್ರೇಯ ಯೆಸ್ಸೆನ್ಟುಕಿಯಲ್ಲಿ ಉಳಿಯಲಿದೆ. ಸೂಪರ್ ಈಗಲ್ಸ್ ಖ್ಯಾತಿಯ ನೈಜೀರಿಯಾ ತಂಡದ ಬೇಸ್ ಕ್ಯಾಂಪ್ ನಲ್ಲಿ ಆಟಗಾರರ ಪತ್ನಿಯರು ಹಾಗೂ ಗರ್ಲ್ ಫ್ರೆಂಡ್ ಗಳಿಗೆ ಮಾತ್ರವೇ ಉಳಿದುಕೊಳ್ಳುವ ಅವಕಾಶವಿದೆ ಜೆನಾರ್ಟ್ ಹೇಳಿದ್ದಾರೆ. ಫಿಫಾ ವಿಶ್ವಕಪ್ ಜೂನ್ 14ರಿಂದ ಆರಂಭಗೊಳ್ಳಲಿದೆ. ಅರ್ಜೆಂಟೀನಾ, ಐಸ್ಲೆಂಡ್ ಹಾಗೂ ಕ್ರೊವೇಷಿಯಾ ತಂಡಗಳೊಂದಿಗೆ ಡಿ ಗುಂಪಿನಲ್ಲಿ ನೈಜೀರಿಯಾ ತಂಡ ಸ್ಥಾನ ಪಡೆದಿದೆ.

Comments 0
Add Comment

  Related Posts

  Virat Kohli Said Ee Sala Cup Namde

  video | Thursday, April 5th, 2018

  Virat Kohli Said Ee Sala Cup Namde

  video | Thursday, April 5th, 2018

  World Oral Health Day

  video | Tuesday, March 20th, 2018

  Virat Kohli Said Ee Sala Cup Namde

  video | Thursday, April 5th, 2018
  Sujatha NR