ಮುಂಬೈ(ಮೇ.21): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಮೇ.22 ರಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ಗೆ  ಪ್ರಯಾಣ ಬೆಳೆಸಲಿದೆ. ಪ್ರಯಾಣಕ್ಕೂ ಮುನ್ನ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಮುಂಬೈ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಇದನ್ನೂ ಓದಿ: ವಿಮಾನದಲ್ಲಿ ವಾಗ್ವಾದ- ಆಸಿಸ್ ಮಾಜಿ ಕ್ರಿಕೆಟಿಗನನ್ನು ಹೊರದಬ್ಬಿದ ಸಿಬ್ಬಂದಿ!

ಇದು ಅತ್ಯಂತ ಸವಾಲಿನ ವಿಶ್ವಕಪ್ ಟೂರ್ನಿ. ಯಾವ ತಂಡ ಬೇಕಾದರೂ ಶಾಕ್ ನೀಡಬಹುದು. ನಮ್ಮ ಎಲ್ಲಾ ಶಕ್ತಿ ಮೀರಿ ಹೋರಾಟ ನಡೆಸಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿಶ್ವಕಪ್ ಟೂರ್ನಿಗಾಗಿ ನಾವು ತಯಾರಿ ಆರಂಭಿಸಿದ್ದೇವೆ. ನಮ್ಮ ಸಾಮರ್ಥ್ಯದ  ಮೇಲೆ ಆಡಲಿದ್ದೇವೆ. ಇಲ್ಲಿ ಎದುರಾಳಿ ಯಾರೇ ಆದರೂ ನಮ್ಮ ಗುರಿ ಗೆಲುವು ಎಂದು ಕೊಹ್ಲಿ ಹೇಳಿದ್ದಾರೆ.

 

 

ಇದನ್ನೂ ಓದಿ: ಭಾರತ ವಿಶ್ವಕಪ್‌ ತಂಡದಲ್ಲಿ ಇಲ್ಲ ಯಾವುದೇ ಬದಲಾವಣೆ

ಟೀಂ ಇಂಡಿಯಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ ವಿಶ್ವಕಪ್ ನಮ್ಮದಾಗಲಿದೆ ಎಂದು ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಇಂಗ್ಲೆಂಡ್ ಕಂಡೀಷನ್‌ಗೆ ಹೊಂದಿಕೊಂಡು ಪ್ರದರ್ಶನ ನೀಡುವುದು ಸವಾಲು ಎಂದು ಶಾಸ್ತ್ರಿ ಹೇಳಿದ್ದಾರೆ. ಮೇ. 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯ ಆಡಲಿದೆ.