ಸಿಡ್ನಿ(ಮೇ.21): ಕ್ರಿಕೆಟಿಗರ ಮೊಂಡು ವರ್ತನೆ ಸುದ್ದಿಯಾಗುತ್ತಿರುದು ಇದೇ ಮೊದಲಲ್ಲ. ಬಾರ್, ಪಾರ್ಟಿ ಸಂದರ್ಭದಲ್ಲಿ ಜಗಳ ಮಾಡಿ ಪ್ರಕರಣ ದಾಖಲಾಗಿರುವ ಸಾಕಷ್ಟು ಘಟನೆಗಳಿವೆ. ಇದೀಗ ವಿಮಾನದಲ್ಲಿ ರಂಪಾಟ ಮಾಡಿ ಸಂಕಷ್ಟಕ್ಕೆ ಸಿಲುಕಿದೆ ಘಟನೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಾಗ್ವಾದ ನಡೆಸಿ ವಿಮಾನ ಹಾರಾಟಕ್ಕೆ ಅಡ್ಡಿ ಮಾಡಿದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್‌‌ನನ್ನು ವಿಮಾನದಿಂದಲೇ ಹೊರದಬ್ಬಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡ ಪ್ರಕಟಿಸಿದ ಸ್ಟೀವ್ ವ್ಹಾ!

2019ರ ವಿಶ್ವಕಪ್ ಟೂರ್ನಿಯಲ್ಲಿ ವೀಕ್ಷಕ  ವಿವರಣೆಗಾರನಾಗಿ ಆಯ್ಕೆಯಾಗಿರುವ ಮೈಕಲ್ ಸ್ಲೇಟರ್, ಸಿಡ್ನಿ ಯಿಂದ, ತವರೂರಾದ ವಾಗ್ಗಾಗೆ ತೆರಳಲು ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಇಬ್ಬರ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ವಿಮಾನ ಹತ್ತದೇ  ವಾಗ್ವಾದ ನಡೆಸಿದ ಮೈಕಲ್ ಸ್ಲೇಟರ್ ವಿಮಾನ ಹಾರಾಟಕ್ಕೆ ಅಡ್ಡಿಪಡಿಸಿದ್ದರು. ಬಳಿಕ ನೇರವಾಗಿ ವಿಮಾನ ಹತ್ತಿ ಶೌಚಾಲಯದ ಒಳಹೊಕ್ಕು ಬಾಗಿಲು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಕ್ರಿಕೆಟಿಗ

ವಿಮಾನ ಹಾರಾಟ 30 ನಿಮಿಷ ವಿಳಂಭವಾದ ಕಾರಣ ಮೊದಲೇ ರೊಚ್ಚಿಗೆದ್ದಿದ್ದ ಪೈಲೆಟ್, ಸ್ಲೇಟರ್‌ನನ್ನು ಹೊರಹಾಕುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಹೀಗಾಗಿ ಭದ್ರತಾ ಸಿಬ್ಬಂದಿ ಮೈಕಲ್ ಸ್ಲೇಟರ್‌ನ್ನು ಹೊರಹಾಕಿದ್ದಾರೆ. ಹೀಗಾಗಿ ಮೈಕಲ್ ಸ್ಲೇಟಕ್ ಬೇರೊಂದು ವಿಮಾನ ಹಿಡಿದು ಮನಕೆಡೆ ತೆರಳುವ ಪರಿಸ್ಥಿತಿ ಬಂದಿದೆ.