ಸೌಥಾಂಪ್ಟನ್(ಜೂ.10): ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹೋರಾಟಕ್ಕೆ ಮಳೆ ಕಾಟ ಜೋರಾಗಿದೆ. ಈಗಾಗಲೇ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸಂಪೂರ್ಣ ಮಳೆಗೆ ಆಹುತಿಯಾಗಿದೆ. ಇದೀಗ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ನಿರಂತವಾಗಿ ಸುರಿಯುತ್ತಿರುವ ಮಳೆ ಸೌತ್ಆಫ್ರಿಕಾ ತಂಡದ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: ಯುವರಾಜ್ ಸಿಂಗ್ ನಿವೃತ್ತಿ- ವಿಶ್ವಕಪ್ ಹೀರೋಗೆ ಶುಭಕೋರಿದ ಲೆಜೆಂಡ್ಸ್!

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು. ಹಶೀಮ್ ಅಮ್ಲಾ ಹಾಗೂ ಏಡೈನ್ ಮಕ್ರಾಂ ಒಂಕಿಂಗೆ ಪೆವಿಲಿಯನ್ ಸೇರಿಕೊಂಡರು. ಸೌತ್ ಆಫ್ರಿಕಾ 7.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 29 ರನ್‌ ಸಿಡಿಸಿತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು.

ಪಂದ್ಯ ಪುನರ್ ಆರಂಭಕ್ಕೆ ಮಳೆ ಅವಕಾಶ ನೀಡುತ್ತಿಲ್ಲ. ಸದ್ಯ ಮಳೆ ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ. ಈಗಾಗಲೇ ಆಡಿದ 3 ಪಂದ್ಯದಲ್ಲಿ ಮೂರರಲ್ಲೂ ಸೋತಿರುವ ಸೌತ್ ಆಫ್ರಿಕಾಗೆ ಈ ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯ ರದ್ದಾದರೆ ಸೌತ್ಆಫ್ರಿಕಾ ವಿಶ್ವಕಪ್ ಪಯಣ ಮತ್ತಷ್ಟು ಕಠಿಣವಾಗಲಿದೆ.