ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ಎದುರಾಗಲಿದೆ ಶಾಕ್- ಕುಂಬ್ಳೆ ಎಚ್ಚರಿಕೆ!
ವಿಶ್ವಕಪ್ ಟೂರ್ನಿಗೆ 10 ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿರುವ ತಂಡಗಳು ತಮ್ಮ ಬಲಿಷ್ಠ ಎದುರಾಳಿಗಳನ್ನು ಮಣಿಸಲು ರಣತಂತ್ರ ರೂಪಿಸುತ್ತಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಎಚ್ಚರಿಕೆ ನೀಡಿದ್ದಾರೆ.
ಮುಂಬೈ(ಮೇ.19): ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ, ಇಂಗ್ಲೆಂಡ್ ಸೇರಿದಂತೆ ಬಲಿಷ್ಠ ತಂಡಗಳಿಗೆ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಎಚ್ಚರಿಕೆ ನೀಡಿದ್ದಾರೆ. ಬಲಿಷ್ಠ ತಂಡಗಳನ್ನು ಮಣಿಸಲು ಎಲ್ಲಾ ತಂಡಗಳು ರಣತಂತ್ರ ರೂಪಿಸುತ್ತಿದೆ. ಆದರೆ ಅಫ್ಘಾನಿಸ್ತಾನ ದಿಗ್ಗಜರಿಗೆ ಶಾಕ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಕುಂಬ್ಳೆ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಗೆಲ್ಲೋ ತಂಡ ಯಾವುದು- ಗಂಭೀರ್ ಹೇಳಿದ್ರು ಭವಿಷ್ಯ!
2018ರ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಅಫ್ಘಾನಿಸ್ತಾನ ತಂಡ ಶಾಕ್ ನೀಡಿತ್ತು. ಅಫ್ಘಾನಿಸ್ತಾನ ತಂಡ ಈಗ ಕ್ರಿಕೆಟ್ ಶಿಶುವಾಗಿ ಉಳಿದಿಲ್ಲ. ಯಾವುದೇ ಬಲಿಷ್ಠ ತಂಡಕ್ಕೂ ಠಕ್ಕರ್ ನೀಡೋ ಸಾಮರ್ಥ್ಯವಿದೆ. ಅಫ್ಘಾನ್ ತಂಡ ಆಟಗಾರಾರದ ರಶೀದ್ ಖಾನ್, ಮೊಹಮ್ಮದ್ ನಬಿ, ಮಜೀಬ್ ಯುಆರ್ ರಹಮಾನ್ ಸೇರಿದಂತೆ ಹಲವು ಕ್ರಿಕೆಟಿಗರು ಅತ್ಯುತ್ತಮ ಆಟಗಾರರಾಗಿ ಮಿಂಚುತ್ತಿದ್ದಾರೆ. ಹೀಗಾಗಿ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2019: ವಿಂಡೀಸ್ ಮೀಸಲು ಆಟಗಾರನಾಗಿ ಬ್ರಾವೋ ಆಯ್ಕೆ!
ಅಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸಬೇಡಿ. 2018ರ ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ 2ನೇ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಎಲ್ಲರ ಲೆಕ್ಕಾಚಾರ ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಕುಂಬ್ಳೆ ಹೇಳಿದ್ದಾರೆ.