ದೆಹಲಿ(ಮೇ.19): ವಿಶ್ವಕಪ್ ಟೂರ್ನಿಗೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಯಾವ ತಂಡ  ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲಿದೆ ಅನ್ನೋ ಚರ್ಚೆಗಳು ನಡೆಯುತ್ತಿದೆ. ಟೀಂ ಇಂಡಿಯಾ ಕೂಡ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಇದೀಗ  ಮಾಜಿ ಕ್ರಿಕೆಟಿಗ, 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಗೌತಮ್ ಗಂಭೀರ್ ಇದೀಗ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲ್ಯದ ಫೋಟೋ!

ಗಂಭೀರ್ ಪ್ರಕಾರ ಈ ಭಾರಿ ವಿಶ್ವಕಪ್ ಗೆಲ್ಲೋದು ಟೀಂ ಇಂಡಿಯಾ ಅಲ್ಲ, ಆತಿಥೇಯ ಇಂಗ್ಲೆಂಡ್ ಕೂಡ ಅಲ್ಲ. ಅದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎಂದು ಗಂಭೀರ್ ಹೇಳಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇತ್ತ ಫಿಂಚ್ ನಾಯಕತ್ವದ ತಂಡ  ಭಾರತ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಆಸ್ಟ್ರೇಲಿಯಾ ಈ ಭಾರಿ ಪ್ರಶಸ್ತಿ ಗೆಲ್ಲಲಿದೆ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಪಾಕ್ ತಂಡಕ್ಕೆ ಮಾರಕ ವೇಗಿ ಆಯ್ಕೆ- ಶುರುವಾಯ್ತು ನಡುಕ!

2019ರ ಪ್ರಶಸ್ತಿ ಗೆಲ್ಲೋ ತಂಡಗಳಲ್ಲಿ ನನ್ನ ಮೊದಲ ಆಯ್ಕೆ ಆಸ್ಟ್ರೇಲಿಯಾ. ಇನ್ನು ರೇಸ್‌ನಲ್ಲಿರುವ ಇನ್ನೆರಡು ತಂಡಗಳಲ್ಲಿ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾಗೆ ಸ್ಥಾನ ನೀಡುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ. ಆಸಿಸ್ ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ತಂಡವಾಗಿದೆ ಎಂದಿದ್ದಾರೆ.