Asianet Suvarna News Asianet Suvarna News

ವಿಶ್ವಕಪ್ 2019: ಕ್ರಿಕೆಟಿಗರ ಜೊತೆ ಪತ್ನಿಯರ ಪ್ರವಾಸ- ಬಿಸಿಸಿಐನಿಂದ ಮಹತ್ವ ನಿರ್ಧಾರ!

ವಿಶ್ವಕಪ್ ಟೂರ್ನಿಗೆ ಭರದ ಸಿದ್ದತೆ ಆರಂಭಿಸಿರುವ ಬಿಸಿಸಿಐ ಇದೀಗ ಹಲವು ನಿರ್ಬಂಧಗಳನ್ನು ಹೇರಿದೆ. ಇದೀಗ ಕ್ರಿಕೆಟಿಗರ ಜೊತೆ ಪತ್ನಿಯರಿಗೆ ಅವಕಾಶ ನೀಡೋ ಕುರಿತು ಬಿಸಿಸಿಐ ಮಹತ್ವದ ಕೈಗೊಂಡಿದೆ. 

Team India cricketers WAGs to be allowed only 15 days during the world cup tourney
Author
Bengaluru, First Published May 9, 2019, 8:30 AM IST

ನವದೆಹಲಿ(ಮೇ.09): ಐಸಿಸಿ ಏಕದಿನ ವಿಶ್ವಕಪ್‌ ವೇಳೆ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಪತ್ನಿ, ಪ್ರೇಯಸಿ ಹಾಗೂ ಕುಟುಂಬ ಸದಸ್ಯರಿಗೆ ಕೇವಲ 15 ದಿನಗಳು ಮಾತ್ರ ಉಳಿಯಲು ಬಿಸಿಸಿಐ ಅನುಮತಿ ನೀಡಿದೆ. ಅಷ್ಟೇ ಅಲ್ಲ, ಟೂರ್ನಿ ಆರಂಭಗೊಂಡು 21 ದಿನಗಳ ಬಳಿಕವಷ್ಟೇ ಅವರು ತಮ್ಮ ಪತ್ನಿ ಇಲ್ಲವೇ ಕುಟುಂಬ ಸದಸ್ಯರನ್ನು ಭೇಟಿ ಮಾಡಬೇಕಿದೆ. 

ಇದನ್ನೂ ಓದಿ: No Way.. ಇನ್ಮುಂದೆ ಬುಮ್ರಾ ನೋ ಬಾಲ್ ಹಾಕೋಕೆ ಚಾನ್ಸೇ ಇಲ್ಲ..!

ಮೇ 30ರಂದು ವಿಶ್ವಕಪ್‌ ಆರಂಭಗೊಳ್ಳಲಿದ್ದು, ಜೂನ್‌ 5ರಂದು ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಹೀಗಾಗಿ ಜೂ.16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆಟಗಾರರ ಕುಟುಂಬ ಸದಸ್ಯರು ಗೈರಾಗಲಿದ್ದಾರೆ. ಆಸ್ಪ್ರೇಲಿಯಾ ಪ್ರವಾಸದ ವೇಳೆ ಎದುರಾದ ಹೋಟೆಲ್‌ ಕೊಠಡಿ, ಪ್ರಯಾಣ, ಪಂದ್ಯದ ಪಾಸ್‌ ಸೇರಿದಂತೆ ಹಲವು ಸಮಸ್ಯೆಗಳನ್ನು ತಪ್ಪಿಸಲು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ವಿಶ್ವಕಪ್ ಮೀಸಲು ಆಟಗಾರನಾಗಿ ಅನುಭವಿ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸ್ಥಾನ

ಜೂ.22ರ ಆಷ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಕುಟುಂಬ ಸದಸ್ಯರಿಗೆ ತಂಡದೊಂದಿಗೆ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. 

Follow Us:
Download App:
  • android
  • ios