ಪ್ಯಾರಿಸ್(ಜು.19]: ಫಿಫಾ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಯುವ ಪ್ರತಿಭೆ ಕಿಲಿಯನ್ ಎಂಬಾಪೆ ವಿಶ್ವಕಪ್‌ನಿಂದ ಪಡೆದ ಪೂರ್ತಿ ಸಂಭಾವನೆಯನ್ನು ಚಾರಿಟಿ ಸಂಸ್ಥೆಗೆ ದಾನ ಮಾಡಲು ನಿರ್ಧರಿಸಿದ್ದಾರೆ. 

ಪ್ರತಿ ಪಂದ್ಯಕ್ಕೆ ₹15.28 ಲಕ್ಷ ಸಂಭಾವನೆ ಪಡೆದ ಎಂಬಾಪೆ, ಒಟ್ಟು 7 ಪಂದ್ಯಗಳನ್ನು ಆಡಿದ್ದರು. ಜತೆಗೆ ಟ್ರೋಫಿ ಗೆದ್ದಿದ್ದಕ್ಕೆ ಹೆಚ್ಚುವರಿ ₹2.39 ಕೋಟಿ ಪಡೆದರು. ಒಟ್ಟು ₹3.42 ಕೋಟಿ ಹಣವನ್ನು ವಿಕಲಾಂಗ ಚೇತನರಿಗೆ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಪ್ರೀಮಿಯರ್ ಡಿ ಕಾರ್ಡೆ ಎನ್ನುವ ಸಂಸ್ಥೆಗೆ ದಾನ ಮಾಡಲಿದ್ದಾರೆ ಎಂದು ಫ್ರಾನ್ಸ್‌ನ ಮಾಧ್ಯಮಗಳು ವರದಿ ಮಾಡಿವೆ.

2018ನೇ ಸಾಲಿನ ಫಿಫಾ ವಿಶ್ವಕಪ್ ಆವೃತ್ತಿಯಲ್ಲಿ ಕ್ರೊವೇಷಿಯಾ ತಂಡವನ್ನು ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.