49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಂಧು, ಕೊರಿಯಾ ಎದುರಾಳಿ ವಿರುದ್ಧ 5 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದರು.

ಗ್ಲಾಸ್ಗೊ(ಆ.23): ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌'ಶಿಪ್‌'ನ ಮಹಿಳಾ ಸಿಂಗಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಮೊದಲ ಸುತ್ತಲ್ಲಿ ಬೈ ಪಡೆದಿದ್ದ ಸಿಂಧು, ಮಂಗಳವಾರ ಎರಡನೇ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಕಿಮ್ ಹ್ಯು ಮಿನ್ ವಿರುದ್ಧ 21-16, 21-14 ಸುಲಭ ಗೆಲುವು ದಾಖಲಿಸಿದರು.

49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಂಧು, ಕೊರಿಯಾ ಎದುರಾಳಿ ವಿರುದ್ಧ 5 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದರು.

ಪುಟಿದೆದ್ದ ಪ್ರಣೀತ್, ಅಜಯ್: ಸಿಂಗಾಪುರ್ ಓಪನ್ ಚಾಂಪಿಯನ್ ಬಿ.ಸಾಯಿಪ್ರಣೀತ್, ಹಾಂಕಾಂಗ್‌'ನ ವೀ ನಾನ್ ವಿರುದ್ಧ ಎರಡೂ ಗೇಮ್‌'ಗಳಲ್ಲಿ ಹಿನ್ನಡೆ ಅನುಭವಿಸಿದ್ದರೂ ಆನಂತರ ಪಂದ್ಯವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲ ಗೇಮ್‌'ನಲ್ಲಿ 5-9, 14-16ರಲ್ಲಿ ಹಿಂದಿದ್ದ ಪ್ರಣೀತ್ 21-18ರಲ್ಲಿ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌'ನಲ್ಲಿ 10-13, 15-17ರಲ್ಲಿ ಹಿನ್ನಡೆ ಅನುಭವಿಸಿದ್ದ 25 ವರ್ಷದ ಆಟಗಾರ ಸತತ 6 ಅಂಕ ಗಳಿಸಿ 21-17ರಲ್ಲಿ ಗೇಮ್ ಗೆದ್ದು, ಪಂದ್ಯ ಜಯಿಸಿದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಅಜಯ್ ಜಯರಾಮ್, ಆಸ್ಟ್ರಿಯಾದ ಲುಕಾ ವ್ರಾಬರ್ ವಿರುದ್ಧ ಕೇವಲ ೩೧ ನಿಮಿಷಗಳಲ್ಲಿ 21-14, 21-12 ಗೇಮ್'ಗಳಿಂದ ಗೆಲುವು ಪಡೆದರು.

ಭಾರತದ ಅಗ್ರ ಮಿಶ್ರ ಡಬಲ್ಸ್ ಜೋಡಿಯಾದ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಮುಂದಿನ ಸುತ್ತಿಗೆ ಪ್ರವೇಶಿಸಿದರೆ, ಅಶ್ವಿನಿ ಪೊನ್ನಪ್ಪ-ಸುಮಿತ್ ರೆಡ್ಡಿ ಹಾಗೂ ಸಾತ್ವಿಕ್ ಸಾಯಿರಾಜ್-ಮನೀಶಾ ಜೋಡಿ ಸೋತು ನಿರಾಸೆ ಅನುಭವಿಸಿತು.

ಲೀ ಚಾಂಗ್ ವೀಗೆ ಆಘಾತ: ದಿಗ್ಗಜ ಆಟಗಾರ ಮಲೇಷ್ಯಾದ ಲೀ ಚಾಂಗ್ ವೀ ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ಮೊದಲ ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ. ಮೊದಲ ಸುತ್ತಲೇ ಚಾಂಗ್ ವೀ, ಫ್ರಾನ್ಸ್‌'ನ ಬ್ರೈಸ್ ಲೆವರ್‌'ಡೆಜ್ ವಿರುದ್ಧ 19-21, 24-22, 17-21 ಗೇಮ್‌'ಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ. ವಿಶ್ವ ಚಾಂಪಿಯನ್

ಶಿಪ್‌'ನಲ್ಲಿ ಚಾಂಗ್ ವೀ 3 ಬೆಳ್ಳಿ ಗೆದ್ದಿದ್ದರು.