ಬಾಸೆಲ್‌(ಸ್ವಿಜರ್‌ಲೆಂಡ್‌)ಆ.22 : ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಬುಧವಾರ ವಿಶ್ವ ಚಾಂಪಿಯನ್‌ಶಿಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ದಾಖಲೆಯ 17ನೇ ಜಯ ಸಾಧಿಸಿದ್ದು, ಅತಿಹೆಚ್ಚು ಪಂದ್ಯ ಗೆದ್ದ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ರ ದಾಖಲೆ ಸರಿಗಟ್ಟಿದರು. 

ಇದನ್ನೂ ಓದಿ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಲಿನ್ ಡಾನ್‌ಗೆ ಆಘಾತ ನೀಡಿದ ಪ್ರಣಯ್‌!

ಮೊದಲ ಸುತ್ತಿನ ಬೈ ಪಡೆದಿದ್ದ ಸಿಂಧು, 2ನೇ ಸುತ್ತಿನಲ್ಲಿ ಚೈನೀಸ್‌ ತೈಪೆಯ ಪೈ ಯು ಪೊ ವಿರುದ್ಧ 21-14, 21-14 ನೇರ ಗೇಮ್‌ಗಳಿಂದ ಗೆದ್ದರು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 9ನೇ ಶ್ರೇಯಾಂಕಿತೆ ಅಮೆರಿಕದ ಬೀವೆನ್‌ ಝಾಂಗ್‌ರನ್ನು ಎದುರಿಸಲಿದ್ದಾರೆ. ಡಚ್‌ ಎದುರಾಳಿ ಸೊರಯಾ ವಿರುದ್ಧ 21-10, 21-11 ನೇರ ಗೇಮ್‌ಗಳಿಂದ ಸೈನಾ ಜಯಿಸಿದರು. ಇಸ್ರೇಲ್‌ನ ಮಿಶ ಝಿಲ್ಬರ್‌ಮ್ಯಾನ್‌ ವಿರುದ್ಧ ಶ್ರೀಕಾಂತ್‌ ಪ್ರಯಾಸದ 13-21, 21-13, 18-11ರಿಂದ ಜಯಿಸಿದರು.