ಭಾರತದ ತಾರಾ ಶಟ್ಲರ್ ಎಚ್.ಎಸ್ ಪ್ರಣಯ್ ಐದು ಬಾರಿ ವಿಶ್ವ ಚಾಂಪಿಯನ್‌, ಒಲಂಪಿಕ್ ಪದಕ ವಿಜೇತ ಚೀನಾದ ಲಿನ್‌ ಡಾನ್‌ಗೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮತ್ತೋರ್ವ ಶಟ್ಲರ್ ಸಾಯಿ ಪ್ರಣೀತ್ ಕೂಡಾ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಸ್ವಿಜರ್‌ಲೆಂಡ್‌(ಆ.21): ಭಾರತದ ತಾರಾ ಶಟ್ಲರ್‌ಗಳಾದ ಎಚ್‌.ಎಸ್‌ ಪ್ರಣಯ್‌ ಹಾಗೂ ಬಿ.ಸಾಯಿ ಪ್ರಣೀತ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

Scroll to load tweet…

ಪ್ರತಿಭೆಗೆ ದೇಶದಲ್ಲಿ ಬೆಲೆಯಿಲ್ಲ: ಶಟ್ಲರ್ ಪ್ರಣಯ್ ಆಕ್ರೋಶ

ಲಂಡನ್‌ ಒಲಿಂಪಿಕ್ಸ್‌ ಸ್ವರ್ಣ ಪದಕ ವಿಜೇತ ಹಾಗೂ ಐದು ಬಾರಿ ವಿಶ್ವ ಚಾಂಪಿಯನ್‌ ಚೀನಾದ ಲಿನ್‌ ಡಾನ್‌ರನ್ನು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮಣಿಸಿದ ಪ್ರಣಯ್‌ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು. 62 ನಿಮಿಷಗಳ ಸೆಣಸಾಟದಲ್ಲಿ 21-11, 13-21, 21-7 ಗೇಮ್‌ಗಳಿಂದ ಪ್ರಣಯ್‌ ಜಯಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಜಪಾನ್‌ ತಾರೆ ಕೆಂಟೊ ಮೊಮೊಟರನ್ನು ಎದುರಿಸಲಿದ್ದಾರೆ. 

Scroll to load tweet…

ಗರಿಷ್ಠ ಸಂಭಾವನೆ: ಸಿಂಧು ಭಾರತದ ಶ್ರೀಮಂತ ಮಹಿಳಾ ಅಥ್ಲೀಟ್

ಕೊರಿಯಾದ ಡೊಂಗ್‌ ಕೆನ್‌ ಲೀ ಅವರನ್ನು 21-16, 21-15 ನೇರ ಗೇಮ್‌ಗಳಿಂದ ಸೋಲಿಸಿದ ಸಾಯಿ ಪ್ರಣೀತ್‌ ಪ್ರಿ ಕ್ವಾರ್ಟರ್‌ ಪ್ರವೇಶಿಸಿದ್ದು, ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್‌ ಅಥವಾ ಇಂಡೋನೇಷ್ಯಾ ಶಟ್ಲರ್‌ ವಿರುದ್ಧ ಆಡಲಿದ್ದಾರೆ.