Asianet Suvarna News Asianet Suvarna News

ಆಸೀಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಭಾರತ

ಲೀಗ್ ಹಂತದ 4 ಪಂದ್ಯಗಳನ್ನು ಗೆದ್ದ ಹರ್ಮನ್‌ಪ್ರೀತ್ ಪಡೆ 8 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಟೂರ್ನಿಯಲ್ಲಿ ಮೊದಲ ಸೋಲನುಭವಿಸಿದ ಆಸ್ಟ್ರೇಲಿಯಾ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.

Womens T20 World Cup India win by 48 runs to top group B
Author
Guyana, First Published Nov 18, 2018, 7:46 AM IST

ಗಯಾನ(ನ.18): ಐಸಿಸಿ ಮಹಿಳಾ ಟಿ೨೦ ವಿಶ್ವಕಪ್ ಚಾಂಪಿಯನ್‌ಶಿಪ್ ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸುವ ಮೂಲಕ ಭಾರತ ತಂಡ ಅಜೇಯವಾಗಿ
ಉಳಿಯಿತು. ಶನಿವಾರ ರಾತ್ರಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 48 ರನ್‌ಗಳಿಂದ ಮಣಿಸಿತು. ಈ ಮೂಲಕ ಲೀಗ್ ಹಂತದ 4 ಪಂದ್ಯಗಳನ್ನು ಗೆದ್ದ
ಹರ್ಮನ್‌ಪ್ರೀತ್ ಪಡೆ 8 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಟೂರ್ನಿಯಲ್ಲಿ ಮೊದಲ ಸೋಲನುಭವಿಸಿದ ಆಸ್ಟ್ರೇಲಿಯಾ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.

ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನೂ 2 ಎಸೆತಗಳು
ಬಾಕಿ ಇರುವಂತೆ 119 ರನ್‌ಗಳಿಗೆ ಆಲೌಟ್ ಆಯಿತು. ಸ್ಪಿನ್ ಮೋಡಿಗೆ ಕುಸಿದ ಆಸೀಸ್: ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 27 ರನ್‌ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ನಂತರ ಬಂದ ಆಶ್ಲೆಘ್ (20), ನಾಯಕಿ ಮೆಗ್ಲೆನ್ನಿಂಗ್ (10) ರಚೆಲ್ (8) ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ಎಲೈಸಿ ಪೆರ್ರಿ (39*) ರನ್‌ಗಳಿಸಿದ್ದು ಹೊರತುಪಡಿಸಿದರೆ ಇನ್ನುಳಿದ ಆಟಗಾರ್ತಿಯರು ಭಾರತದ ಸ್ಪಿನ್ ಮೋಡಿಗೆ ತಲೆದೂಗಿತು. ಭಾರತದ ಪರ ಅನುಜಾ ಪಾಟೀಲ್ 3, ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಪೂನಂ ಯಾದವ್ ತಲಾ 2 ವಿಕೆಟ್ ಪಡೆದರು.

ಸ್ಮತಿ-ಹರ್ಮನ್ ಆಸರೆ: ಇದಕ್ಕೂ ಮುನ್ನ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ (83) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (43) ರನ್‌ಗಳಿಸಿ ಭಾರತದ ಸವಾಲಿನ ಮೊತ್ತಕ್ಕೆ ಕಾರಣರಾದರು. ಸ್ಮತಿ ಮಂಧನಾ ಅವರ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಇದಾಗಿದೆ. ಮಾಜಿ ನಾಯಕಿ ಮಿಥಾಲಿ ರಾಜ್‌ಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಉಳಿದಂತೆ ಕನ್ನಡತಿ ವೇದಾ ಕೃಷ್ಣಮೂರ್ತಿ (3), ಹೇಮಲತಾ (1), ದೀಪ್ತಿ ಶರ್ಮಾ (8), ಆರುಂಧತಿ ರೆಡ್ಡಿ (6) ರನ್‌ಗಳಿಸಿ ನಿರಾಸೆ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ 20 ಓವರ್‌ಗಳಲ್ಲಿ 167/8
ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 119/10

Follow Us:
Download App:
  • android
  • ios