ಮಹಿಳಾ ಹಾಕಿ ವಿಶ್ವಕಪ್: ಭಾರತ-ಇಂಗ್ಲೆಂಡ್ ಪಂದ್ಯ ಡ್ರಾನಲ್ಲಿ ಅಂತ್ಯ

ಪಂದ್ಯದಲ್ಲಿ 8 ಪೆನಾಲ್ಟಿ ಕಾರ್ನರ್‌ಗಳ ಜತೆ ಇಂಗ್ಲೆಂಡ್‌ನ ಅನೇಕ ಗೋಲು ಗಳಿಸುವ ಅವಕಾಶಗಳನ್ನು ವಿಫಲಗೊಳಿಸಿದ ಗೋಲ್ ಕೀಪರ್ ಸವಿತಾ ಪೂನಿಯಾ ಭಾರತ ಡ್ರಾ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಆತಿಥೇಯ ಇಂಗ್ಲೆಂಡ್‌ಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಬಲ ನೀಡಿದರು. ಆದರೆ ಒತ್ತಡಕ್ಕೆ ಮಣಿಯದ ಭಾರತ, ಅತ್ಯುತ್ತಮ ಆಟ ಪ್ರದರ್ಶಿಸಿತು.

Womens Hockey World Cup India Play 1-1 Draw vs England In Pool B Opener

ಲಂಡನ್[ಜು.22]: 14ನೇ ಆವೃತ್ತಿಯ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ ಜಯದ ಆರಂಭ ಪಡೆಯುವಲ್ಲಿ ಎಡವಿದೆ. ಆದರೆ ಆತಿಥೇಯ ಇಂಗ್ಲೆಂಡ್ ವಿರುದ್ಧ 1-1 ಗೋಲುಗಳಲ್ಲಿ ಡ್ರಾ ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಪಂದ್ಯದಲ್ಲಿ 8 ಪೆನಾಲ್ಟಿ ಕಾರ್ನರ್‌ಗಳ ಜತೆ ಇಂಗ್ಲೆಂಡ್‌ನ ಅನೇಕ ಗೋಲು ಗಳಿಸುವ ಅವಕಾಶಗಳನ್ನು ವಿಫಲಗೊಳಿಸಿದ ಗೋಲ್ ಕೀಪರ್ ಸವಿತಾ ಪೂನಿಯಾ ಭಾರತ ಡ್ರಾ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಆತಿಥೇಯ ಇಂಗ್ಲೆಂಡ್‌ಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಬಲ ನೀಡಿದರು. ಆದರೆ ಒತ್ತಡಕ್ಕೆ ಮಣಿಯದ ಭಾರತ, ಅತ್ಯುತ್ತಮ ಆಟ ಪ್ರದರ್ಶಿಸಿತು. 25ನೇ ನಿಮಿಷದಲ್ಲಿ ನೇಹಾ ಗೋಯಲ್ ಭಾರತ ಪರ ಗೋಲು ಗಳಿಸಿ, ತಂಡ ಮುನ್ನಡೆ ಸಾಧಿಸಲು ಕಾರಣರಾದರು. ಮೊದಲಾರ್ಧದ ಮುಕ್ತಾಯಕ್ಕೆ ಭಾರತ 1-0 ಮುನ್ನಡೆ ಪಡೆದುಕೊಂಡಿತು.

ದ್ವಿತೀಯಾರ್ಧದ ಬಹುತೇಕ ಸಮಯ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಿತು. ಇಂಗ್ಲೆಂಡ್ ಎಷ್ಟೇ ಬಾರಿ ಭಾರತದ ವೃತ್ತದೊಳಗೆ ಪ್ರವೇಶ ಮಾಡಿದರೂ, ರಾಣಿ ಪಡೆ ಒತ್ತಡಕ್ಕೆ ಸಿಲುಕಲಿಲ್ಲ. ಒಂದರ ಹಿಂದೆ ಒಂದು ಪೆನಾಲ್ಟಿ ಕಾರ್ನರ್ ಪಡೆದರೂ, ಇಂಗ್ಲೆಂಡ್‌ಗೆ ಗೋಲು ಗಳಿಸಲು ಸವಿತಾ ಹಾಗೂ ರಕ್ಷಣಾ ಪಡೆ ಬಿಡಲಿಲ್ಲ.

ಆದರೆ, 54ನೇ ನಿಮಿಷದಲ್ಲಿ ಸಿಕ್ಕ 9ನೇ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಇಂಗ್ಲೆಂಡ್ ಕೊನೆಗೂ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಲು ಯಶಸ್ವಿಯಾಯಿತು. ಓಸ್ಲೆ ಲಿಲ್ಲಿ ಇಂಗ್ಲೆಂಡ್
ಸಮಬಲಕ್ಕೆ ಕಾರಣರಾದರು. ಕೊನೆ 7 ನಿಮಿಷಗಳಲ್ಲಿ ಭಾರತ ಮುನ್ನಡೆ ಸಾಧಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾನೊಂದಿಗೆ ಮುಕ್ತಾಯಗೊಂಡಿತು. ಭಾರತ ತನ್ನ ಮುಂದಿನ ಪಂದ್ಯವನ್ನು ಜು.26ಕ್ಕೆ ಐರ್ಲೆಂಡ್ ವಿರುದ್ಧ  ಆಡಲಿದೆ. 

Latest Videos
Follow Us:
Download App:
  • android
  • ios