ವಿಶ್ವಕಪ್'ನಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ತೋರ್ತಿದ್ದಾರೆ. ಭಾರತೀಯರು ಈ ಪರಿಯ ಪ್ರದರ್ಶನ ತೋರಲು ಕಾರಣವೇನು ಗೊತ್ತಾ? ಇಂಗ್ಲೆಂಡ್ ಫ್ಲೈಟ್ ಹತ್ತಲೂ ಮುನ್ನ ಆಟಗಾರ್ತಿಯರು ಭೇಟಿಯಾಗಿದ್ದ ಆ ಜಾಗ. ಆ ಒಂದು ಸ್ಥಳಕ್ಕೆ ಭೇಟಿ ನೀಡಿದ ಪರಿಣಾಮವಾಗಿ ಇಂದು ನಮ್ಮ ವನಿತೆಯರು ಭರ್ಜರಿ ಆಟವಾಡ್ತಿದ್ದಾರೆ. ಅಷ್ಟಕ್ಕೂ ವನಿತೆಯರು ಭೇಟಿ ನೀಡಿದ ಆ ಸ್ಥಳ ಯಾವುದು? ಇಲ್ಲಿದೆ ವಿವರ
ನವದೆಹಲಿ(ಜು.05): ವಿಶ್ವಕಪ್'ನಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ತೋರ್ತಿದ್ದಾರೆ. ಭಾರತೀಯರು ಈ ಪರಿಯ ಪ್ರದರ್ಶನ ತೋರಲು ಕಾರಣವೇನು ಗೊತ್ತಾ? ಇಂಗ್ಲೆಂಡ್ ಫ್ಲೈಟ್ ಹತ್ತಲೂ ಮುನ್ನ ಆಟಗಾರ್ತಿಯರು ಭೇಟಿಯಾಗಿದ್ದ ಆ ಜಾಗ. ಆ ಒಂದು ಸ್ಥಳಕ್ಕೆ ಭೇಟಿ ನೀಡಿದ ಪರಿಣಾಮವಾಗಿ ಇಂದು ನಮ್ಮ ವನಿತೆಯರು ಭರ್ಜರಿ ಆಟವಾಡ್ತಿದ್ದಾರೆ. ಅಷ್ಟಕ್ಕೂ ವನಿತೆಯರು ಭೇಟಿ ನೀಡಿದ ಆ ಸ್ಥಳ ಯಾವುದು? ಇಲ್ಲಿದೆ ವಿವರ
ಇಂಗ್ಲೆಂಡ್'ನಲ್ಲಿ ಭಾರತದ ವನಿತೆಯರ ಯಶಸ್ವಿ ಪಯಣ
ಇಂಗ್ಲೆಂಡ್'ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್'ನಲ್ಲಿ ಟೀಂ ಇಂಡಿಯಾದ ವನಿತೆಯರು ಭರ್ಜರಿ ಆಟವಾಡ್ತಿದ್ದಾರೆ. ಆಡಿರುವ 3 ಲೀಗ್ ಪಂದ್ಯಗಳಲ್ಲೂ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲ ಇವರ ಆಟದ ಪರಿ ನೋಡುತ್ತಿದ್ದರೆ ಈ ಬಾರಿ ಟ್ರೋಫಿ ಎತ್ತಿಹಿಡಿದು ವಿಶ್ವ ಚಾಂಪಿಯನ್ಸ್ ಎನ್ನಿಸಿಕೊಳ್ಳೋದು ಗ್ಯಾರೆಂಟಿ ಅನಿಸುತ್ತಿದೆ.
ಇಂಗ್ಲೆಂಡ್'ಗೆ ತೆರಳುವುದಕ್ಕೂ ಮುನ್ನ ಬ್ಲೂ ಗರ್ಲ್ಸ್ ಹೋಗಿದ್ದೆಲ್ಲಿಗೆ.?
ಟೀಂ ಇಂಡಿಯಾದ ವನಿತೆಯರು ಇಷ್ಟು ಕಾನ್ಪಿಡೆಂಟ್ ಆಗಿ ಆಡಲು, ಎದುರಾಳಿ ತಂಡಗಳನ್ನೂ ಚೆಂಡಾಡ್ತಿರೋದು, ಜಯಗಳ ಮೇಲೆ ಜಯ ಸಾಧಿಸಿತ್ತುರುವುದಕ್ಕೆ ಕಾರಣ ಅವರು ಇಂಗ್ಲೆಂಡ್ಗೆ ತೆರಳೋದಕ್ಕೂ ಮುನ್ನ ಹೋಗಿದ್ದ ಆ ಸ್ಥಳ. ಆ ಸ್ಥಳದ ಮಹಿಮೆಯಿಂದಲೇ ಇಂದು ಟೀಂ ಇಂಡಿಯಾ ಗೆಲುವಿನ ನಾಗಲೋಟದಲ್ಲಿ ಮಿಂದೇಳ್ತಿರೋದು.
ಕಪಿಲ್ ಶರ್ಮಾ ಶೋನಲ್ಲಿ ಮಜಾ ಉಡಾಯಿಸಿದ ಮಿಥಾಲಿ ಟೀಂ
ಹೌದು, ಮಹತ್ವದ ಟೂರ್ನಿ ವಿಶ್ವಕಪ್'ಗೆ ಹೋಗುವ ಮುನ್ನ ಮಿಥಾಲಿ ರಾಜ್ ಆಂಡ್ ಟೀಂ ದ ಕಪಿಲ್ ಶರ್ಮಾ ಶೋಗೆ ಭೇಟಿ ನೀಡಿತ್ತು. ಕಪಿಲ್ ಶರ್ಮಾ ಮತ್ತು ತಂಡದವರು ಸಿಡಿಸಿದ ನಗೆಬಾಂಬ್ಗಳಿಗೆ ಕುಣಿದು ಕುಪ್ಪಳಿಸಿದ್ರು. ಡ್ಯಾನ್ಸ್ ಮಾಡಿ ಏಂಜಾಯ್ ಮಾಡಿದ್ರು. ಅವರ ಡ್ಯಾನ್ಸ್ ನೋಡಿ ಎಲ್ರೂ ಫಿದಾ ಆಗಿಬಿಟ್ಟರು.

ತಂಡದ ಸೀಕ್ರೇಟ್ಸ್ ಬಿಚ್ಚಿಟ್ಟ ಟೀಂ ಇಂಡಿಯಾ ಗರ್ಲ್ಸ್: ಮಹಿಳಾ ಕ್ರಿಕೆಟ್'ನಲ್ಲೂ ಸ್ಲೆಡ್ಜಿಂಗ್ ನಡೆಯುತ್ತಾ..?
ಕಪಿಲ್ ಶರ್ಮಾ ಶೋನಲ್ಲಿ ಪಾಲ್ಗೊಂಡಿದ್ದ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್, ಹರ್ಮನ್ಪ್ರೀತ್ ಕೌರ್, ವೇದ ಕೃಷ್ಣಮೂರ್ತಿ ಮತ್ತು ಜುಲಾನ್ ಗೋಸ್ವಾಮಿ ಕೆಲವೊಂದು ಸೀಕ್ರೇಟ್ಸ್ಗಳನ್ನ ಬಿಚ್ಚಿಟ್ರು. ಅದರಲ್ಲೂ ಮಹಿಳಾ ಕ್ರಿಕೆಟ್ನಲ್ಲಿ ಸ್ಲೆಡ್ಜಿಂಗ್ ನಡೆಯುತ್ತಾ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಎಲ್ಲರನ್ನೂ ದಂಗು ಬಡಿಸಿತ್ತು.
ತಮ್ಮ ಮನದಾಳದ ಮಾತುಗಳನ್ನ ಆಡಿ, ಕಪಿಲ್ ಮತ್ತು ಟೀಂ ಮಾಡಿದ ತಮಾಷೆಗಳಿಗೆ ನಕ್ಕು ಎಂಜಾಯ್ ಮಾಡಿದ್ದ ಟೀಂ ಇಂಡಿಯಾ ರಿಲ್ಯಾಕ್ಸ್ ಆಗಿತ್ತು. ರಿಲ್ಯಾಕ್ಸ್ ಮೂಡ್ನಲ್ಲೇ ಇಂಗ್ಲೆಂಡ್'ಗೆ ತೆರಳಿದ ಟೀಂ ಇಂಡಿಯಾದ ವನಿತೆಯರು ಭರ್ಜರಿ ಪ್ರದರ್ಶನ ತೋರ್ತಿದ್ದಾರೆ. ಇವರ ಯಶೋಗಾತೆ ಹೀಗೆ ಮುಂದುವರಿಯಲಿ ಈ ಬಾರಿಯ ವಿಶ್ವಕಪ್ ತಮ್ಮದಾಗಿಸಿಕೊಳ್ಳಲಿ ಎಂಬುದು ನಮ್ಮ ಆಶಯ.
