ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ಭಾರತೀಯ ಮಹಿಳಾ ಕ್ರೀಡೆಗಳಲ್ಲಿ  ಹೊಸ ದಾಖಲೆ ಸೃಷ್ಟಿಸಿದೆ.

ಬೆಂಗಳೂರು(ಆ.05): ಇತ್ತೀಚಿಗೆ ಇಂಗ್ಲೆಂಡ್'ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ಭಾರತೀಯ ಮಹಿಳಾ ಕ್ರೀಡೆಗಳಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2017ರ ರಿಯೋ' ಒಲಿಂಪಿಕ್ಸ್'ನಲ್ಲಿ ನಡೆದ ಬ್ಯಾಟ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಸ್ಪೇನ್ ದೇಶದ ಮರಿನ್ ನಡುವಿನ ಪಂದ್ಯವನ್ನು 17.3 ಮಿಲಿಯನ್ ಮಂದಿ ವೀಕ್ಷಕರು ನೋಡಿದ್ದು, ಈವರೆಗಿನ ದಾಖಲೆಯಾಗಿತ್ತು. ಈಗ ಇದನ್ನು ಮೀರಿಸಿದ ದಾಖಲೆ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ್ದಾಗಿದೆ. ಫೈನಲ್ ಪಂದ್ಯವನ್ನು 19.53 ಮಿಲಿಯನ್ ಮಂದಿ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.