ನವ​ದೆ​ಹ​ಲಿ(ಆ.28): ಭಾರತ ಮಹಿಳಾ ಕ್ರಿಕೆಟ್‌ ತಂಡದ ಹಿರಿಯ ಆಟ​ಗಾರ್ತಿ ಮಿಥಾಲಿ ರಾಜ್‌ ಮುಂಬ​ರುವ ದಕ್ಷಿಣ ಆಫ್ರಿಕಾ ವಿರುದ್ಧ ಸರ​ಣಿಗೆ ತಾವು ಆಯ್ಕೆಗೆ ಲಭ್ಯ​ರಿ​ರು​ವು​ದಾಗಿ ತಿಳಿ​ಸಿ​ದ್ದಾರೆ. ಆದರೆ ಸೆ.5ರಂದು ನಡೆ​ಯಲಿ​ರುವ ಆಯ್ಕೆ ಸಮಿತಿ ಸಭೆಯಲ್ಲಿ , ಬಿಸಿ​ಸಿಐ ಆಯ್ಕೆಗಾರರು ಮಿಥಾ​ಲಿ​ಯನ್ನು ತಂಡಕ್ಕೆ ಆಯ್ಕೆ ಮಾಡು​ತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಯುವ ಆಟಗಾರ್ತಿಯರಿಗೆ ಅವಕಾಶ ನೀಡೋ ನಿಟ್ಟಿನಲ್ಲಿ ಆಯ್ಕೆ ಸಮಿತಿ ಮಿಥಾಲಿಗೆ ಕೊಕ್ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ, ಧೋನಿ ಹಿಂದಿಕ್ಕಿದ ಮಿಥಾಲಿ ರಾಜ್!

ಮುಂದಿನ ವರ್ಷ ಟಿ20 ವಿಶ್ವಕಪ್‌ ಇರುವ ಕಾರಣ, ಯುವ ಆಟ​ಗಾರ್ತಿಯ​ರಿಗೆ ಅವ​ಕಾಶ ನೀಡುವ ಸಲು​ವಾಗಿ ಮಿಥಾ​ಲಿ​ಯನ್ನು ಕೈಬಿ​ಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲ​ಗಳು ತಿಳಿ​ಸಿ​ವೆ. ದ. ಆಫ್ರಿಕಾ ವಿರುದ್ದ 5 ಪಂದ್ಯ​ಗಳ ಸರಣಿ ಸೆ.24ರಿಂದ ಆರಂಭ​ಗೊ​ಳ್ಳ​ಲಿದೆ. ಮುಂದಿನ ವರ್ಷ ಫೆಬ್ರ​ವ​ರಿ-ಮಾರ್ಚ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ಟಿ20 ವಿಶ್ವ​ಕಪ್‌ ನಡೆ​ಯ​ಲಿದೆ.