2014ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸದ ವೇಳೆ ಕೊಹ್ಲಿ- ವ್ಯಾಟ್ ಜೋಡಿ ಭೇಟಿಯಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ವಿಲ್ಲೇಗೆ ಬ್ಯಾಟ್'ವೊಂದನ್ನು ಗಿಫ್ಟ್ ಆಗಿ ನೀಡಿದ್ದರು.

ನವದೆಹಲಿ(ಮಾ.15): ಕಳೆದ 4 ವರ್ಷಗಳ ಹಿಂದೆ ವಿರಾಟ್ ಕೊಹ್ಲಿಗೆ ಮದುವೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ಮತ್ತೆ ಸುದ್ದಿಯಲ್ಲಿದ್ದಾರೆ.

ಟಿ20 ವಿಶ್ವಕಪ್ ವೇಳೆ ಕೊಹ್ಲಿ ಅದ್ಭುತ ಬ್ಯಾಟಿಂಗ್ ನೋಡಿ ಮನಸೋತಿದ್ದ ಇಂಗ್ಲೆಂಡ್ ಆಟಗಾರ್ತಿ ವ್ಯಾಟ್, ಕೊಹ್ಲಿಗೆ ಮದುವೆ ಪ್ರಸ್ತಾಪವಿಟ್ಟಿದ್ದರು.

Scroll to load tweet…

4 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಕೊಹ್ಲಿ ಈಗ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರನ್ನು ವರಿಸಿದ್ದಾರೆ. ಆದರೆ ವ್ಯಾಟ್ ಭಾರತಕ್ಕೆ ಟಿ20 ತ್ರಿಕೋನ ಸರಣಿಯಾಡಲು ಬರುವ ಮೂಲಕ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂತಿರಾ..? ವಿಶೇಷ ಇದೆ, ಭಾರತ-ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ವ್ಯಾಟ್ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ನೀಡಿದ್ದ ಬ್ಯಾಟ್ ಬಳಸಲಿದ್ದಾರೆ.

Scroll to load tweet…

2014ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸದ ವೇಳೆ ಕೊಹ್ಲಿ- ವ್ಯಾಟ್ ಜೋಡಿ ಭೇಟಿಯಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ವಿಲ್ಲೇಗೆ ಬ್ಯಾಟ್'ವೊಂದನ್ನು ಗಿಫ್ಟ್ ಆಗಿ ನೀಡಿದ್ದರು.