ಕೋಲ್ಕತಾ[ಮೇ.09]: ಐಪಿಎಲ್ 11ನೇ ಆವೃತ್ತಿ ರೋಚಕ ಘಟ್ಟ ತಲುಪಿದ್ದು, ಪ್ಲೇ-ಆಫ್‌'ನಲ್ಲಿ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಸನ್‌'ರೈಸರ್ಸ್‌, ಚೆನ್ನೈ ಹಾಗೂ ಪಂಜಾಬ್ ಅಂಕಪಟ್ಟಿಯಲ್ಲಿ ಮೊದಲ 3 ಸ್ಥಾನಗಳನ್ನು ಪಡೆ ಯುವ ನೆಚ್ಚಿನ ತಂಡಗಳೆನಿಸಿದ್ದು, 4ನೇ ಸ್ಥಾನ ಯಾರ ಪಾಲಾಗಿದೆ ಎನ್ನುವ ಕುತೂಹಲ ಹುಟ್ಟಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌'ಗೆ ಕೋಲ್ಕತಾ ನೈಟ್‌'ರೈಡರ್ಸ್‌ ತನ್ನ ತವರು ಮೈದಾನ ಈಡನ್ ಗಾರ್ಡನ್ಸ್‌'ನಲ್ಲಿಂದು ಆತಿಥ್ಯ ವಹಿಸಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದೆನಿಸಿದೆ. ಎರಡೂ ತಂಡಗಳು ತಲಾ 10 ಪಂದ್ಯಗಳನ್ನಾಡಿದ್ದು, ಇನ್ನುಳಿದ 4ರಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಮುಂಬೈ ಸದ್ಯ 4 ಜಯ ಕಂಡಿದ್ದರೆ, ಕೋಲ್ಕತಾ 5ರಲ್ಲಿ ಗೆದ್ದಿದೆ. ಅಗ್ರ 3 ಸ್ಥಾನಗಳಲ್ಲಿರುವ ತಂಡಗಳು 18ಕ್ಕೂ ಹೆಚ್ಚು ಅಂಕ ಗಳಿಸುವ ಸಾಧ್ಯತೆ ಇದ್ದು, 4ನೇ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗುವ ನಿರೀಕ್ಷೆ ಇದೆ. 
ಕೆಕೆಆರ್ ವಿರುದ್ಧ ಮುಂಬೈ ಈ ವರೆಗೂ ಆಡಿರುವ 22 ಐಪಿಎಲ್ ಪಂದ್ಯಗಳಲ್ಲಿ 17ರಲ್ಲಿ ಗೆದ್ದಿದ್ದು, ಮತ್ತೊಮ್ಮೆ ಪ್ರಾಬಲ್ಯ ಮುಂದುವರಿಸಲು ಎದುರು ನೋಡುತ್ತಿದೆ. 
ಸಂಭಾವ್ಯ ತಂಡ:
KKR: ಲಿನ್, ನರೈನ್, ನಿತೀಶ್ ರಾಣಾ, ಶುಭ್‌'ಮನ್, ದಿನೇಶ್ ಕಾರ್ತಿಕ್, (ನಾಯಕ), ರಸೆಲ್, ಚಾವ್ಲಾ, ಜಾನ್ಸನ್, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ಸೂರ್ಯಕುಮಾರ್ ಯಾದವ್.
MI: ಲೆವಿಸ್, ಇಶಾನ್, ರೋಹಿತ್(ನಾಯಕ), ಹಾರ್ದಿಕ್, ಕೃನಾಲ್, ಡುಮಿನಿ, ಕಟ್ಟಿಂಗ್, ಮೆಕ್ಲೆನಾಘನ್, ಮರ್ಕಂಡೆ,ಜಸ್‌'ಪ್ರೀತ್ ಬುಮ್ರಾ