ಮೂರು ವರ್ಷಗಳ ಬಳಿಕ ವಿಂಡೀಸ್ ತಂಡ ಕೂಡಿಕೊಂಡ ಡೆವೋನ್ ಸ್ಮಿತ್

First Published 25, May 2018, 9:48 PM IST
Windies recall Devon Smith for Sri Lanka Tests after three year long hiatus
Highlights

ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ 13 ಆಟಗಾರರನ್ನೊಳಗೊಂಡ ವೆಸ್ಟ್’ಇಂಡಿಸ್ ತಂಡವನ್ನು ಪ್ರಕಟಿಸಲಾಗಿದ್ದು, ಮೂರು ವರ್ಷಗಳ ಬಳಿಕ ಎಡಗೈ ಬ್ಯಾಟ್ಸ್’ಮನ್ ಡೆವೋನ್ ಬ್ರಾವೋ ತಂಡದಲ್ಲಿ  ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಜಮೈಕಾ[ಮೇ.25]: ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ 13 ಆಟಗಾರರನ್ನೊಳಗೊಂಡ ವೆಸ್ಟ್’ಇಂಡಿಸ್ ತಂಡವನ್ನು ಪ್ರಕಟಿಸಲಾಗಿದ್ದು, ಮೂರು ವರ್ಷಗಳ ಬಳಿಕ ಎಡಗೈ ಬ್ಯಾಟ್ಸ್’ಮನ್ ಡೆವೋನ್ ಬ್ರಾವೋ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ದೇಶಿಯ ಪಂದ್ಯಗಳಲ್ಲಿ 84.23ರ ಸರಾಸರಿಯಲ್ಲಿ 1095 ರನ್ ಕಲೆಹಾಕಿರುವ ಬ್ರಾವೋ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಳೆದ ವರ್ಷ ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗಿದ್ದ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಜಾಮರ್ ಹ್ಯಾಮಿಲ್ಟನ್ ಕೂಡಾ ತಂಡದಲ್ಲಿ 2ನೇ ವಿಕೆಟ್’ಕೀಪರ್ ಆಗಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. 27 ವರ್ಷದ ಹ್ಯಾಮಿಲ್ಟನ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ’ಎ’ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು.
ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಪೈಕಿ ಮೊದಲ ಪಂದ್ಯವು ಜೂನ್ 6ರಂದು ಟ್ರಿನಿಡ್ಯಾಡ್’ನಲ್ಲಿ ಆರಂಭವಾಗಲಿದೆ.
ತಂಡ ಹೀಗಿದೆ:
ಜೇಸನ್ ಹೋಲ್ಡರ್[ನಾಯಕ], ದೇವೇಂದ್ರ ಬಿಶೋ, ಡೆವೋನ್ ಸ್ಮಿತ್, ಕ್ರೇಗ್ ಬ್ರಾಥ್’ವೈಟ್, ಕಿರಾನ್ ಪೊಲ್ಲಾರ್ಡ್, ರೋಸ್ಟನ್ ಚೇಸ್, ಮಿಗುಲ್ ಕಮ್ಮಿನ್ಸ್, ಶೇನ್ ಡೌರಿಚ್[ವಿಕೆಟ್ ಕೀಪರ್], ಶನೋನ್ ಗ್ಯಾಬ್ರಿಲ್, ಜಾಮರ್ ಹ್ಯಾಮಿಲ್ಟನ್[ವಿಕೆಟ್ ಕೀಪರ್], ಶಿಮ್ರಾನ್ ಹ್ಯಾಟ್’ಮ್ಯಾರ್, ಶೈ ಹೋಪ್, ಕೀಮರ್ ರೋಚ್. 

loader