ವಿಂಬಲ್ಡನ್: ಭಾರತದ ಯೂಕಿ ಭಾಂಬ್ರಿಗೆ ನಿರಾಸೆ; 2ನೇ ಸುತ್ತಿಗೆ ಫೆಡರರ್
- ಭಾರತದ ಯೂಕಿ ಭಾಂಬ್ರಿಗೆ ನಿರಾಸೆ
- ಮೊದಲ ಸುತ್ತಲ್ಲೇ ಸ್ಲೋನ್ ಔಟ್
- ಯುಎಸ್ ಚಾಂಪಿಯನ್ ಸ್ಟೀಫನ್ಸ್‌ಗೆ ಆಘಾತ:
ಲಂಡನ್ : ದಾಖಲೆಯ 9ನೇ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೆನಿಸ್ ಮಾಂತ್ರಿಕ ರೋಜರ್ ಫೆಡರರ್, ತಮ್ಮ ಅಭಿಯಾನವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಸ್ ದೊರೆ, ಸರ್ಬಿಯಾದ ದುಸಾನ್ ಲಜೊವಿಚ್ ವಿರುದ್ಧ 6-1, 6-3, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಯೂಕಿ ಭಾಂಬ್ರಿಗೆ ನಿರಾಸೆ:
ಪ್ರಧಾನ ಸುತ್ತಿನ ಸಿಂಗಲ್ಸ್ ವಿಭಾಗಕ್ಕೆ ಅರ್ಹತೆ ಪಡೆದಿದ್ದ ಭಾರತದ ಏಕೈಕ ಆಟಗಾರ ಯೂಕಿ ಭಾಂಬ್ರಿ, ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇಟಲಿಯ ಥಾಮಸ್ ಫ್ಯಾಬಿಯಾನೋ ವಿರುದ್ಧ ನಡೆದ ಪಂದ್ಯದಲ್ಲಿ ಯೂಕಿ 6-2, 3-6, 3-6 2-6 ಸೆಟ್ ಗಳಲ್ಲಿ ಸೋತರು.
ಯುಎಸ್ ಚಾಂಪಿಯನ್ ಸ್ಟೀಫನ್ಸ್‌ಗೆ ಆಘಾತ:
ವಿಂಬಲ್ಡನ್ ಮೊದಲ ದಿನವೇ ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಹಾಲಿ ಯುಎಸ್ ಓಪನ್ ಚಾಂಪಿಯನ್, ವಿಶ್ವ ನಂ.4 ಅಮೆರಿಕದ ಸ್ಲೋನ್ ಸ್ಟೀಫನ್ಸ್ ಮೊದಲ ಸುತ್ತಿನಲ್ಲೇ ಕ್ರೊವೇಷಿಯಾದ ಡೊನ್ನಾ ವಿಕಿಚ್ ವಿರುದ್ಧ 1-6,3-6 ಸೆಟ್‌ಗಳಲ್ಲಿ ಸೋಲುಂಡು ಹೊರಬಿದ್ದರು. ಕಳೆದ ತಿಂಗಳಷ್ಟೇ ಸ್ಲೋನ್, ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದಿದ್ದರು.