Wimbledon 2023: ಮೂರನೇ ಸುತ್ತಿಗೆ ಇಗಾ ಸ್ವಿಯಾಟೆಕ್‌ ಲಗ್ಗೆ

ಚೊಚ್ಚಲ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಇಗಾ ಸ್ವಿಯಾಟೆಕ್
ವಿಶ್ವ ನಂ.1 ಆಟಗಾರ್ತಿ ಪೋಲೆಂಡ್‌ನ ಸ್ವಿಯಾಟೆಕ್ 3ನೇ ಸುತ್ತಿಗೆ ಲಗ್ಗೆ
ಸ್ಪೇನ್‌ನ ಸಾರಾ ಸೊರಿಬೆಸ್‌ ವಿರುದ್ಧ 6-2, 6-0 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು

Wimbledon 2023 Iga Swiatek enters 3rd round kvn

ಲಂಡನ್‌(ಜು.06): ಚೊಚ್ಚಲ ವಿಂಬಲ್ಡನ್‌ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿದಿರುವ ವಿಶ್ವ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿಗೇರಿದ್ದಾರೆ. ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಇಗಾ, ಸ್ಪೇನ್‌ನ ಸಾರಾ ಸೊರಿಬೆಸ್‌ ವಿರುದ್ಧ 6-2, 6-0 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಪಂದ್ಯದ ಯಾವುದೇ ಹಂತದಲ್ಲಿ ಸ್ವಿಯಾಟೆಕ್‌ಗೆ ಸ್ಪೇನ್‌ ಆಟಗಾರ್ತಿಯಿಂದ ಪ್ರತಿರೋಧ ಎದುರಾಗಲಿಲ್ಲ.

ಇನ್ನು 2ನೇ ಶ್ರೇಯಾಂಕಿತೆ ಬೆಲಾರಸ್‌ನ ಅರೈನಾ ಸಬಲೆಂಕಾ, 6ನೇ ಶ್ರೇಯಾಂಕಿತೆ ಟ್ಯುನೀಶಿಯಾದ ಒನ್ಸ್‌ ಜಬುರ್‌ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಸಬಲೆಂಕಾ ಹಂಗೇರಿಯ ಯುಡ್ವಾರ್ಡಿ ವಿರುದ್ಧ 6-3, 6-1ರಲ್ಲಿ ಗೆದ್ದರೆ, ಪೋಲೆಂಡ್‌ನ ಮಗ್ದಲೆನಾ ಫ್ರೆಂಚ್‌ ವಿರುದ್ಧ ಜಬುರ್‌ 6-3, 6-3ರಲ್ಲಿ ಜಯಿಸಿದರು.

ಮಾಜಿ ವಿಶ್ವ ನಂ.1 ಬ್ರಿಟನ್‌ನ ಆ್ಯಂಡಿ ಮರ್ರೆ, ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ತಮ್ಮ ದೇಶದವರೇ ಆದ ರ್‍ಯಾನ್‌ ಪೆನಿಸ್ಟನ್‌ ವಿರುದ್ಧ 6-3, 6-0, 6-1ರಲ್ಲಿ ಜಯಿಸಿ ಶುಭಾರಂಭ ಮಾಡಿದರು. 3ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಸಹ 2ನೇ ಸುತ್ತಿಗೆ ಪ್ರವೇಶಿಸಿದರು.

ಈಜು: ಕರ್ನಾಟಕ ಸಮಗ್ರ ಚಾಂಪಿಯನ್‌

ಹೈದರಾಬಾದ್‌: ಈಜಿನಲ್ಲಿ ಕರ್ನಾಟಕದ ಪ್ರಾಬಲ್ಯ ಮುಂದುವರಿದಿದ್ದು, 76ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 16 ಚಿನ್ನ, 10 ಬೆಳ್ಳಿ, 12 ಕಂಚಿನೊಂದಿಗೆ ಒಟ್ಟು 38 ಪದಕ ಗೆದ್ದ ಕರ್ನಾಟಕ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. ರಾಜ್ಯವು ಪುರುಷರ ವಿಭಾಗದಲ್ಲಿ 135, ಮಹಿಳೆಯರ ವಿಭಾಗದಲ್ಲಿ 156 ಅಂಕಗಳೊಂದಿಗೆ ಒಟ್ಟು 299 ಅಂಕ ಗಳಿಸಿತು. ಕೂಟದ 4ನೇ ಹಾಗೂ ಕೊನೆಯ ದಿನವಾದ ಬುಧವಾರ ರಾಜ್ಯದ ಮೂವರು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ರಾಜ್ಯವು ಒಟ್ಟು 5 ಚಿನ್ನ, 5 ಬೆಳ್ಳಿ ತನ್ನದಾಗಿಸಿಕೊಂಡಿತು.

ಸಾಕ್ಷಿಯನ್ನು ಧೋನಿ ಮೊದಲು ಭೇಟಿಯಾಗಿದ್ದೆಲ್ಲಿ? ಇಲ್ಲಿದೆ ನೋಡಿ ನಿಜವಾದ ಇಂಟ್ರೆಸ್ಟಿಂಗ್ ಸ್ಟೋರಿ

ಮಹಿಳೆಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ನೀನಾ ವೆಂಕಟೇಶ್‌, ಮಹಿಳೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಲಿನೈಶಾ, ಮಹಿಳೆಯರ 200 ಮೀ. ಫ್ರೀ ಸ್ಟೈಲ್‌ನಲ್ಲಿ ಧಿನಿಧಿ ದೇಸಿಂಘು ರಾಷ್ಟ್ರೀಯ ದಾಖಲೆ ಬರೆದರು.

8 ಚಿನ್ನದೊಂದಿಗೆ 25 ಪದಕ ಗೆದ್ದ ಮಹಾರಾಷ್ಟ್ರ, 5 ಚಿನ್ನದೊಂದಿಗೆ ಒಟ್ಟು 9 ಪದಕ ಗೆದ್ದ ಗುಜರಾತ್‌ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು. ರಾಜ್ಯದ ಲಿನೈಶಾ ಮಹಿಳೆಯರ ವಿಭಾಗದಲ್ಲಿ ಶ್ರೇಷ್ಠ ಈಜುಪಟು ಗೌರವಕ್ಕೆ ಪಾತ್ರರಾದರು.

ಬರಲಿದೆ ಐಪಿಎಲ್‌ ರೀತಿ ಸೂಪರ್‌ಕ್ರಾಸ್‌ ಲೀಗ್‌

ನವದೆಹಲಿ: ಐಪಿಎಲ್‌ ಮಾದರಿಯಲ್ಲಿ ವಿಶ್ವದ ಮೊದಲ ಫ್ರಾಂಚೈಸಿ ಆಧಾರಿತ ಸೂಪರ್‌ ಕ್ರಾಸ್‌ ರೇಸಿಂಗ್‌ ಲೀಗ್‌ ಈ ವರ್ಷ ಆರಂಭಗೊಳ್ಳಲಿದ್ದು, ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗೂ ನಡೆಯಲಿದೆ. ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಸಹಯೋಗದೊಂದಿಗೆ ಸೂಪರ್‌ಕ್ರಾಸ್ ರೇಸಿಂಗ್ ಆಯೋಜನೆಗೊಳ್ಳುತ್ತಿದ್ದು, ಲೀಗ್‌ನ ಮೊದಲ ತಂಡವಾಗಿ ಪುಣೆಯ ಪಂಚಶೀಲ ರೇಸಿಂಗ್‌ ತಂಡ ಸೇರ್ಪಡೆಗೊಂಡಿದೆ. ಉದ್ಘಾಟನಾ ರೇಸ್‌ ದೆಹಲಿಯಲ್ಲಿ ನಡೆಯಲಿದ್ದು, ಆ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಇನ್ನುಳಿದ ಚರಣಗಳು ನಡೆಯಲಿವೆ.
 

Latest Videos
Follow Us:
Download App:
  • android
  • ios