Wimbledon 2023: ಕಾರ್ಲೊಸ್ ಆಲ್ಕರಜ್ ಮೂರನೇ ಸುತ್ತಿಗೆ ಲಗ್ಗೆ..!
ವಿಶ್ವ ನಂ.1 ಟೆನಿಸಿಗ ಕಾರ್ಲೊಸ್ ಆಲ್ಕರಜ್ ಅವರ ಮಿಂಚಿನ ಆಟ
ಮೂರನೇ ಸುತ್ತು ಪ್ರವೇಶಿಸಿದ ಸ್ಪೇನ್‌ನ ಆಲ್ಕರಜ್
ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಕೂಡಾ ಮೂರನೇ ಸುತ್ತಿಗೆ ಲಗ್ಗೆ
ಲಂಡನ್(ಜು.08): ವಿಶ್ವ ನಂ.1 ಟೆನಿಸಿಗ, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್, ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ 20ರ ಹರೆಯದ ಆಲ್ಕರಜ್, ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ದ 6-4, 7-6(7/2), 6-3 ನೇರ ಸೆಟ್‌ಗಳಲ್ಲಿ ಜಯಿಸಿದರು. ಇನ್ನು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಡೆನ್ಮಾರ್ಕ್‌ನ ಹೋಲ್ಗರ್ ರುನೆ 3ನೇ ಸುತ್ತಿಗೇರಿದರು.
ರಬೈಕೆನಾ, ಸಬಲೆಂಕಾಗೆ ಜಯ:
ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್, ಕಜಕಿಸ್ತಾನದ ಎಲೆನಾ ರಬೈಕೆನಾ 2ನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲೈಸ್ ಕಾರ್ನೆಟ್ ವಿರುದ್ದ 6-2, 7-6(7-2) ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು. ಇನ್ನು ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ವಿಶ್ವ ನಂ.2 ಶ್ರೇಯಾಂಕಿತ ಆಟಗಾರ್ತಿ ಅರೈನಾ ಸಬಲೆಂಕಾ ಕೂಡಾ ಮೂರನೇ ಸುತ್ತಿಗೇರಿದರು. ಇನ್ನು ಇದೇ ವೇಳೆ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 4ನೇ ಸುತ್ತಿಗೆ ಪ್ರವೇಶ ಪಡೆದರು.
ಸಿಂಧು, ಲಕ್ಷ್ಯ ಸೇನ್ ಕೆನಡಾ ಓಪನ್ ಕ್ವಾರ್ಟರ್ ಫೈನಲ್ಗೆ
ಕ್ಯಾಲ್ಗರಿ: ಈ ವರ್ಷದ ಚೊಚ್ಚಲ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಭಾರತದ ತಾರಾ ಶಟ್ಲರ್ಗಳಾದ ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್ ಕೆನಡಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ರಾತ್ರಿ ಮಹಿಳಾ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಸಿಂಧು, ಜಪಾನ್ನ ನಾಟ್ಸುಕಿ ನಿದೈರಾ ವಿರುದ್ಧ ಸೆಣಸಬೇಕಿತ್ತು. ಆದರೆ ನಾಟ್ಸುಕಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಸಿಂಧು ವಾಕ್ಓವರ್ ಮೂಲಕ ಕ್ವಾರ್ಟರ್ಗೇರಿದರು.
Wimbledon 2023: ನೋವಾಕ್ ಜೋಕೋವಿಚ್ 3ನೇ ಸುತ್ತಿಗೆ ಲಗ್ಗೆ
ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಬ್ರೆಜಿಲ್‌ನ ಯೊಗೋರ್ ಕೊಯೆಲ್ಹೊ ಅವರನ್ನು 21-15, 21-11 ಅಂತರದಲ್ಲಿ ಮಣಿಸಿ ಅಂತಿಮ 4ರ ಘಟ್ಟಪ್ರವೇಶಿಸಿದರು. ಆದರೆ ಪುರುಷರ ಡಬಲ್ಸ್ನಲ್ಲಿ ವಿಷ್ಣುವರ್ಧನ್-ಕೃಷ್ಣಪ್ರಸಾದ್ ಜೋಡಿ ಸೋತು ಹೊರಬಿತ್ತು.
ಕಿರುಕುಳ ಕೇಸ್: ಬ್ರಿಜ್ಗೆ ದೆಹಲಿ ಕೋರ್ಚ್ ಸಮನ್ಸ್
ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ಗೆ ಶುಕ್ರವಾರ ದೆಹಲಿ ಮ್ಯಾಜಿಸ್ಪ್ರೇಟ್ ಕೋರ್ಚ್ ಸಮನ್ಸ್ ಜಾರಿಗೊಳಿಸಿದೆ. ಬ್ರಿಜ್ ವಿರುದ್ಧ ದೆಹಲಿ ಪೊಲೀಸರು ಸಲ್ಲಿಸಿದ್ದ ಜಾರ್ಜ್ಶೀಟ್ಗೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಿದ ನ್ಯಾ.ಹರ್ಜೀತ್ ಸಿಂಗ್ ಜಸ್ಪಾಲ್ ಅವರು ಜುಲೈ 18ರಂದು ನ್ಯಾಯಾಧೀಶರ ಮುಂದೆ ಹಾಜರಾಗುವಂತೆ ಬ್ರಿಜ್‌ಭೂಷಣ್ ಹಾಗೂ ಡಬ್ಲ್ಯುಎಫ್ಐನ ಮಾಜಿ ಸಹ ಕಾರ್ಯದರ್ಶಿ ನಿತಿನ್ ತೋಮರ್ಗೆ ಸೂಚನೆ ನೀಡಿದೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕಾರು ಅಪಘಾತ..! ಕಾರು ಅಪ್ಪಚ್ಚಿ
ಬಂಗಲೆ ಮುಂದೆ ಕೃತಕಕೆರೆ ನಿರ್ಮಿಸಿದ ನೇಯ್ಮರ್‌ಗೆ 27 ಕೋಟಿ ರುಪಾಯಿ ದಂಡ!
ಸಾವೊ ಪಾಲೊ(ಬ್ರೆಜಿಲ್): ಪರಿಸರ ನಿಯಮಗಳನ್ನು ಉಲ್ಲಂಘಿಸಿ ರಿಯೋ ಡಿ ಜನೆರಿಯೋದಲ್ಲಿರುವ ತಮ್ಮ ನಿವಾಸದ ಮುಂದೆ 10764 ಚದರ ಅಡಿ ಅಳತೆಯ ಕೃತಕ ಕೆರೆ ನಿರ್ಮಾಣ ಮಾಡಿದ್ದಕ್ಕೆ ಬ್ರೆಜಿಲ್‌ನ ತಾರಾ ಫುಟ್ಬಾಲಿಗ ನೇಯ್ಮರ್‌ಗೆ ಸ್ಥಳೀಯ ನಗರಾಡಳಿತವು ಬರೋಬ್ಬರಿ 3.3 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 27.05 ಕೋಟಿ ರು.) ದಂಡ ವಿಧಿಸಿದೆ.