ಐದನೇ ಶ್ರೇಯಾಂಕಿತ ವಾವ್ರಿಂಕಾ, ರಷ್ಯಾದ 49ನೇ ಶ್ರೇಯಾಂಕಿತ ಆಟಗಾರನೆದುರು 6-4,3-6,6-4,6-1 ಸೆಟ್'ಗಳಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಲಂಡನ್(ಜು.04): ಮೂರು ಗ್ರಾಂಡ್'ಸ್ಲಾಂ ವಿಜೇತ ಸ್ವಿಟ್ಜರ್'ಲ್ಯಾಂಡ್'ನ ಸ್ಟಾನ್ಲಿಸ್ಲಾಸ್ ವಾವ್ರಿಂಕಾ ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದು ಆಘಾತವೆದುರಿಸಿದ್ದಾರೆ.

ಇಲ್ಲಿನ ಸೆಂಟರ್ ಕೋರ್ಟ್'ನಲ್ಲಿ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ 21 ವರ್ಷದ ರಷ್ಯಾದ ಡೇನಿಲ್ ಮೆಡ್ವೇಡೇವ್ ಎದುರು ಸ್ವಿಸ್ ಆಟಗಾರ ನಿರಾಸೆ ಅನುಭವಿಸಿದರು.

ಪ್ರಸಕ್ತ ವರ್ಷ ಫ್ರೆಂಚ್ ಓಪನ್'ನಲ್ಲಿ ರನ್ನರ್'ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ವಾವ್ರಿಂಕಾ, 2013ರ ಬಳಿಕ ಇದೇ ಮೊದಲ ಬಾರಿಗೆ ಮೊದಲ ಸುತ್ತಿನಲ್ಲಿ ಹೊರಬಿದ್ದು ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ.

ಐದನೇ ಶ್ರೇಯಾಂಕಿತ ವಾವ್ರಿಂಕಾ, ರಷ್ಯಾದ 49ನೇ ಶ್ರೇಯಾಂಕಿತ ಆಟಗಾರನೆದುರು 6-4,3-6,6-4,6-1 ಸೆಟ್'ಗಳಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.