ಇತ್ತೀಚಿನ ದಿನಗಳಲ್ಲಿ ಫಿಟ್ ಆಟಗಾರರಿಂದ ಇಡೀ ತಂಡವೇ ಬಲಿಷ್ಠವಾಗಿ ರೂಪುಗೊಂಡಿದೆ- ರವೀಂದ್ರ ಜಡೇಜಾ
ಬೆಂಗಳೂರು(ಡಿ.21): ‘ಭಾರತದಲ್ಲಿ ಹುಲಿ, ವಿದೇಶಗಳಲ್ಲಿ ಇಲಿ’ ಎಂಬ ಕಳಂಕದಿಂದ ಭಾರತೀಯ ಕ್ರಿಕೆಟ್ ತಂಡವು ಮುಂಬರುವ ವರ್ಷದಲ್ಲಿ ಖಂಡಿತವಾಗಿಯೂ ಹೊರಬರಲಿದೆ ಎಂಬ ಆಶಾವಾದವನ್ನು ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸಮಾರಂಭಕ್ಕಾಗಿ ಉದ್ಯಾನ ನಗರಿಗೆ ಆಗಮಿಸಿದ್ದ ಅವರು, ‘‘ನಾನು ನನ್ನ ತಂಡ ಮುಂಬರುವ ವರ್ಷಗಳಲ್ಲಿ ವಿಶ್ವದ ಹಲವಾರು ಕ್ರಿಕೆಟ್ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದೇವೆ. ಕಾಲಿಟ್ಟ ಕಡೆಯಲ್ಲೆಲ್ಲಾ ನಾವು ನಮ್ಮ ತಂಡದ ಅಭಿಮಾನಿಗಳನ್ನು ಹತ್ಪೂರ್ವಕವಾಗಿ ರಂಜಿಸಲು ಶತಾಯಗತಾಯ ಪ್ರಯತ್ನಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಫಿಟ್ ಆಟಗಾರರಿಂದ ಇಡೀ ತಂಡವೇ ಬಲಿಷ್ಠವಾಗಿ ರೂಪುಗೊಂಡಿದೆ’’ ಎಂದು ಹೇಳಿದರು.
