ಶಮಿ ಹಾಗೂ ಆತನ ಕುಟುಂಬ ಸದಸ್ಯರು ನಿರಂತರ ಕಿರುಕುಳ ನೀಡುತ್ತಿದ್ದು, ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನವದೆಹಲಿ(ಮಾ.07): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮದ್ ಶಮಿ ಪತ್ನಿ ಹಸೀನ್ ಜಹಾನ್ ತಮ್ಮ ಪತಿ ನನ್ನ ಮೇಲೆ ಹಲ್ಲೆ ನಡೆಸುತ್ತಿರುವುದಲ್ಲದೆ ಪರಸ್ತ್ರೀ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಕ್ಕೆ ಪೂರಕವಾಗಿ ಫೇಸ್'ಬುಕ್'ನಲ್ಲಿ ಎಸ್'ಎಂ'ಎಸ್'ಗಳ ಮಾಹಿತಿ, ಭಾವಚಿತ್ರಗಳು ಹಾಗೂ ಮೊಬೈಲ್ ಸಂಖ್ಯೆಯ ಜೊತೆ ಮಹಿಳೆಯ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ತಮ್ಮ ಪತಿ ಶಮಿ ಮಹಿಳೆ ಗಿಫ್ಟ್ ನೀಡದ ಫೋನ್'ಅನ್ನು ಬಹಿರಂಗಗೊಳಿಸಿದ್ದು, ಇದನ್ನು 2014ರ ಪಿಎಲ್ ಪಂದ್ಯದಲ್ಲಿ ನೀಡಲಾಗಿತ್ತು'ಎಂದು ನ್ಯೂಸ್ ಚಾನಲ್'ವೊಂದರ ವರದಿ ಮಾಡಿದೆ. ಶಮಿ ಹಾಗೂ ಆತನ ಕುಟುಂಬ ಸದಸ್ಯರು ನಿರಂತರ ಕಿರುಕುಳ ನೀಡುತ್ತಿದ್ದು, ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್'ನಲ್ಲಿ ಪ್ರತಿಕ್ರಿಯೆ ನೀಡಿರುವ ಶಮಿ 'ನನ್ನ ಖಾಸಗಿ ಜೀವನದ ಮೂಡಿಬಂದಿರುವ ವರದಿಗಳೆಲ್ಲವೂ ಆಧಾರರಹಿತ. ಇದು ನನ್ನ ವಿರುದ್ಧ ಮಾಡಲಾಗಿರುವ ಪಿತೂರಿ ಹಾಗೂ ನನ್ನ ವೃತ್ತಿ ಜೀವನವನ್ನು ಕೆಡಿಸಬೇಕೆಂದು ಈ ರೀತಿ ಮಾಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.
