12 ಭರ್ಜರಿ ಸಿಕ್ಸ್'ರ್ ಹಾಗೂ 6 ಆಕರ್ಷಕ ಬೌಂಡರಿಗಳಿದ್ದವು. ಲೆವಿಸ್'ರನ್ನು ತಡೆಯಲು ಭಾರತೀಯ ಯಾವ ಬೌಲರ್'ಗಳಿಂದ ಸಾಧ್ಯವಾಗಲಿಲ್ಲ.   ಭಾರತ ಒಡ್ಡಿದ್ದ ಸವಾಲಿನ ಮೊತ್ತ 191 ರನ್'ಗಳನ್ನು 18.3 ಓವರ್'ಗಳಲ್ಲಿ ಕೇವಲ 1 ವಿಕೇಟ್ ನಷ್ಟಕ್ಕೆ ಬೆನ್ನಟ್ಟಿ ಸುಲಭವಾಗಿ ಗುರಿ ಸಾಧಿಸಿ 9 ವಿಕೇಟ್'ಗಳಿಂದ ಜಯಗಳಿಸಿತು. ಎವಿನ್ ಲೆವಿಸ್ ಕ್ರೀಡಾಂಗಣದ ತುಂಬ ಸಿಕ್ಸರ್'ಗಳ ಮಳೆಯನ್ನೇ ಹರಿಸಿ ತಮ್ಮ ಟಿ20 ವೃತ್ತಿ ಬದುಕಿನಲ್ಲಿ 2ನೇ ಶತಕ ದಾಖಲಿಸಿದರು. ಲೆವಿಸ್ 62 ಎಸತಗಳಲ್ಲಿ ಆರ್ಭಟಿಸಿದ 125 ರನ್'ಗಳಲ್ಲಿ

ಕಿಂಗ್'ಸ್ಟನ್(ಜು.10): ಕಿಂಗ್'ಸ್ಟನ್'ನ ಸಬೀನಾ ಪಾರ್ಕ್'ನಲ್ಲಿ ಇಂದು ಲೇವಿಸ್ ಸಿಡಿಸಿದ್ದು ಅಕ್ಷರಶಃ ಸಿಕ್ಸರ್'ಗಳ ಸುರಿಮಳೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ಸರಣಿ ಸೋತಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಯ ಏಕೈಕ ಟಿ20 ಪಂದ್ಯವನ್ನು ಆರಾಮಾಗಿ ಗೆದ್ದುಕೊಂಡಿತು.

ಭಾರತ ಒಡ್ಡಿದ್ದ ಸವಾಲಿನ ಮೊತ್ತ 191 ರನ್'ಗಳನ್ನು 18.3 ಓವರ್'ಗಳಲ್ಲಿ ಕೇವಲ 1 ವಿಕೇಟ್ ನಷ್ಟಕ್ಕೆ ಬೆನ್ನಟ್ಟಿ ಸುಲಭವಾಗಿ ಗುರಿ ಸಾಧಿಸಿ 9 ವಿಕೇಟ್'ಗಳಿಂದ ಜಯಗಳಿಸಿತು. ಎವಿನ್ ಲೆವಿಸ್ ಕ್ರೀಡಾಂಗಣದ ತುಂಬ ಸಿಕ್ಸರ್'ಗಳ ಮಳೆಯನ್ನೇ ಹರಿಸಿ ತಮ್ಮ ಟಿ20 ವೃತ್ತಿ ಬದುಕಿನಲ್ಲಿ 2ನೇ ಶತಕ ದಾಖಲಿಸಿದರು. ಲೆವಿಸ್ 62 ಎಸತಗಳಲ್ಲಿ ಆರ್ಭಟಿಸಿದ 125 ರನ್'ಗಳಲ್ಲಿ12 ಭರ್ಜರಿ ಸಿಕ್ಸ್'ರ್ ಹಾಗೂ 6 ಆಕರ್ಷಕ ಬೌಂಡರಿಗಳಿದ್ದವು. ಲೆವಿಸ್'ರನ್ನು ತಡೆಯಲು ಭಾರತೀಯ ಯಾವ ಬೌಲರ್'ಗಳಿಂದ ಸಾಧ್ಯವಾಗಲಿಲ್ಲ.

ಅಜೇಯರಾಗಿ ಮತ್ತೊಬ್ಬ ಬ್ಯಾಟ್ಸ್'ಮೆನ್ ಮಾರ್ವಿನ್ ಸ್ಯಾಮುವೆಲ್ಸ್ 29 ಎಸತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸ್'ರ್ ಬಾರಿಸಿ 36 ಬಾರಿಸಿ ಗೆಲುವಿನಲ್ಲಿ ತಾವು ಪಾಲುದಾರರಾದರು. ಅತ್ಯಂತ ನಿರೀಕ್ಷೆ ಹುಟ್ಟಿಸಿ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಸ್ಫೋಟಕ ಬ್ಯಾಟ್ಸ್'ಮೆನ್ ಕ್ರಿಸ್ ಗೇಲ್ಹೆಚ್ಚು ಗಮನ ಸೆಳಯದೆ 20 ಎಸತಗಳಲ್ಲಿ 1 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 18 ರನ್ ಮಾತ್ರ ಕಲೆಹಾಕಿದರು.

ಸವಾಲಿನ ಮೊತ್ತ ಕಲೆ ಹಾಕಿದ ಭಾರತ,

ಇದಕ್ಕೂ ಮುನ್ನ ಟಾಸದ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್'ಗಳಲ್ಲಿ6 ವಿಕೇಟ್ 190 ರನ್'ಗಳ ಬೃಹತ್ ಮೊತ್ತ ದಾಖಲಿಸಿತ್ತು.

ಮೊದಲ ಓವರ್'ನಿಂದಲೇ ಬಿರುಸಿನ ಆಟವಾಡಿದ ಆರಂಭಿಕ ಆಟಗಾರರಾದ ವಿರಾಟ್ ಕೋಹ್ಲಿ ಹಾಗೂ ಶಿಖರ್ ಧವನ್ ಮೊದಲ ವಿಕೇಟ್ ನಷ್ಟಕ್ಕೆ 5.3 ಓವರ್'ಗಳಲ್ಲಿ64 ರನ್ ಪೇರಿಸಿದರು.ಕೇವಲ 22 ಚಂಡುಗಳಲ್ಲಿ 7 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್'ನೊಂದಿಗೆ 39 ರನ್ ಸಿಡಿಸಿದ ಕೊಹ್ಲಿ ವಿಲಿಯಮ್ಸ್ ಬೌಲಿಂಗ್'ನಲ್ಲಿ ಸುನಿಲ್ ನರೇನ್'ಗೆ ಕ್ಯಾಚಿತ್ತು ಔಟಾದರು.

ನಂತರ ಅದೇ ಓವರ್'ನಲ್ಲಿಧವನ್(23 ರನ್: 12 ಎಸತ, 5 ಬೌಂಡರಿ) ಕೂಡ ರನ್ ಔಟ್ ಆದರು ನಂತರ 2 ಮತ್ತು 3ನೇ ಕ್ರಮಾಂಕದಲ್ಲಿ ಆಗಮಿಸಿದ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ತಮ್ಮ ಜೊತೆಯಾಟದಲ್ಲಿ 9.5 ಓವರ್'ಗಳಲ್ಲಿ 86 ರನ್ ಸಿಡಿಸಿದರು. ಕಾರ್ತಿಕ್ ಅವರ 29 ಎಸೆತಗಳ 48 ರನ್'ಗಳಲ್ಲಿ 5 ಬೌಂಡರಿ ಹಾಗೂ 3 ಅದ್ಭುತ ಸಿಕ್ಸ್'ರ್'ಗಳಿದ್ದವು. ರಿಷಬ್ ಪಂತ್ ಕೂಡ ತಾವೇನು ಕಡಿಮೆಯಿಲ್ಲ ಎಂಬಂತೆ 35 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 38 ರನ್ ಗಳಿಸಿದರು.

16ನೇ ಓವರ್'ನಲ್ಲಿ ಆಗಮಿಸಿದ ಧೋನಿ ಕೇವಲ 2 ರನ್'ಗಳಿಸಿ ನಿರ್ಗಮಿಸಿದರು. ವಿಂಡೀಸ್ ಪರ ಜೇಸನ್ ಟೇಲರ್ 2/31,ವಿಲಿಯಮ್ಸ್ 2/42 ವಿಕೇಟ್ ಪಡೆದರು.

ಸ್ಕೋರ್ಭಾರತ 20 ಓವರ್'ಗಳಲ್ಲಿ 190/6(ಕೊಹ್ಲಿ:39,ಧವನ್:23,ಪಂತ್:38,ಕಾರ್ತಿಕ್:48)ವೆಸ್ಟ್ ಇಂಡೀಸ್ 18.3 ಓವರ್'ಗಳಲ್ಲಿ 194/1(ಇವಿನ್ ಲೆವಿಸ್: 125*, ಸ್ಯಾಮುವೆಲ್ಸ್:36,ಗೇಲ್:18)ವೆಸ್ಟ್ ಇಂಡೀಸ್'ಗೆ 9 ವಿಕೇಟ್'ಗಳ ಜಯಪಂದ್ಯ ಶ್ರೇಷ್ಟ: ಇವಿನ್ ಲೆವಿಸ್