ಸಾಹಾ ಬದಲಿಗೆ ಪಾರ್ಥಿವ್ ಪಟೇಲ್ ಸ್ಥಾನ ಪಡೆದಿದ್ದೇಕೆ ಗೊತ್ತಾ?

Why Wriddhiman Saha is not playing the second Test
Highlights

ಪಾರ್ಥಿವ್ ಪಟೇಲ್ ಭಾರತದಾಚೆಗೆ 2004ರಲ್ಲಿ ಕಡೆಯ ಬಾರಿಗೆ  ಬಿಳಿ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಅದು ಸ್ಟೀವ್ ವಾ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಹಾಗೆಯೇ ಟೀಂ ಇಂಡಿಯಾದಲ್ಲಿ ಈಗಿರುವ ಯಾವೊಬ್ಬ ಕ್ರಿಕೆಟಿಗ ಪ್ರಥಮ ದರ್ಜೆ ಕ್ರಿಕೆಟ್'ಗೂ ಪದಾರ್ಪಣೆ ಮಾಡಿರಲಿಲ್ಲ. ಇನ್ನುಳಿದಂತೆ ಧವನ್ ಬದಲಿಗೆ ಕನ್ನಡಿಗ ಕೆ.ಎಲ್ ರಾಹುಲ್, ಭುವನೇಶ್ವರ್ ಕುಮಾರ್ ಬದಲಿಗೆ ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದಾರೆ.

ಸೆಂಚೂರಿಯನ್(ಜ.13): ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡ  ಟೀಂ ಇಂಡಿಯ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದೆ. ಅದರಲ್ಲೂ ಮುಖ್ಯವಾಗಿ ಆಡುವ 11ರ ಬಳಗದಲ್ಲಿ ವಿಕೆಟ್ ಕೀಪರ್ ಸ್ಥಾನದಲ್ಲಿ ವೃದ್ಧಿಮಾನ್ ಸಾಹಾ ಬದಲಿಗೆ ಪಾರ್ಥಿವ್ ಪಟೇಲ್ ಸ್ಥಾನ ಪಡೆದಿದ್ದಾರೆ.

ಪಾರ್ಥಿವ್ ಹದಿನೈದುವರೆ ವರ್ಷಗಳ ವೃತ್ತಿಜೀವನದಲ್ಲಿ 24ನೇ ಟೆಸ್ಟ್ ಪಂದ್ಯವಾಡುತ್ತಿರುವ ಪಟೇಲ್, ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದ ಸಾಹಾ ಬದಲಿಗೆ ಸ್ಥಾನ ಪಡೆದಿದ್ದಾರೆ. ಸಾಹಾ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದು, ಈ ಟೆಸ್ಟ್ ಪಂದ್ಯಕ್ಕೆ ನಾವು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ಟಾಸ್ ಬಳಿಕ ಕೊಹ್ಲಿ ಖಚಿತ ಪಡಿಸಿದರು. ಸಾಹಾ ಮೊದಲ ಟೆಸ್ಟ್'ನಲ್ಲಿ ಬ್ಯಾಟಿಂಗ್'ನಲ್ಲಿ ಮೊದಲ ಇನಿಂಗ್ಸ್'ನಲ್ಲಿ 0 ಹಾಗೂ ಎರಡನೇ ಟೆಸ್ಟ್'ನಲ್ಲಿ 8 ರನ್'ಗಳನ್ನಷ್ಟೇ ಕಲೆಹಾಕಿದ್ದರು.

ವಿಶೇಷವೆಂದರೆ ಪಾರ್ಥಿವ್ ಪಟೇಲ್ ಭಾರತದಾಚೆಗೆ 2004ರಲ್ಲಿ ಕಡೆಯ ಬಾರಿಗೆ  ಬಿಳಿ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಅದು ಸ್ಟೀವ್ ವಾ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಹಾಗೆಯೇ ಟೀಂ ಇಂಡಿಯಾದಲ್ಲಿ ಈಗಿರುವ ಯಾವೊಬ್ಬ ಕ್ರಿಕೆಟಿಗ ಪ್ರಥಮ ದರ್ಜೆ ಕ್ರಿಕೆಟ್'ಗೂ ಪದಾರ್ಪಣೆ ಮಾಡಿರಲಿಲ್ಲ. ಇನ್ನುಳಿದಂತೆ ಧವನ್ ಬದಲಿಗೆ ಕನ್ನಡಿಗ ಕೆ.ಎಲ್ ರಾಹುಲ್, ಭುವನೇಶ್ವರ್ ಕುಮಾರ್ ಬದಲಿಗೆ ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದಾರೆ.

 

loader