ವಿರಾಟ್​​ ಕೊಹ್ಲಿ ಬೆಂಗಳೂರಿಗರಿಗೆ ಮೋಸ ಮಾಡಿಬಿಟ್ರು. ತನ್ನ 2ನೇ ತವರಿನಲ್ಲಿ ಉದ್ಧಟತನ ಮೆರೆದುಬಿಟ್ರು. ಹಬ್ಬದ ದಿನ ಖುಷಿಯಿಂದ ಎದ್ದು ಸಿಹಿಸುದ್ದಿ ಕೇಳಬೇಕಾಗಿದ್ದ ಜನರಿಗೆ ಕೊಹ್ಲಿ ಕಹಿ ಸುದ್ದಿ ನೀಡುವಂತೆ ಮಾಡಿಬಿಟ್ರು. ವಿರಾಟ್​ ಬೆಂಗಳೂರಿಗೆ ಮಾಡಿರುವ ಈ ದ್ರೋಹವನ್ನ ಇಲ್ಲಿನ ಜನ ಮರೆಯಲು ತಂಬಾ ದಿನಗಳೇ ಬೇಕು ಅನಿಸುತ್ತಿದೆ.

ಸತತ ಗೆಲುವುಗಳಿಂದ ಮದವೇರಿಸಿಕೊಂಡಿದ್ದ ಟೀಂ ಇಂಡಿಯಾಗೆ ನಿನ್ನೆ ಸಖತ್​ ಶಾಕ್​​ ಆಗಿದೆ. ಆದ್ರೆ ನಿನ್ನೆಯ ಸೋಲಿಗೆ ಕಾರಣರ್ಯಾರು..? ಗೆಲುವಿನ ಹಳಿಯಲ್ಲಿ ಸಾಗುತ್ತಿದ್ದ ಟೀಂ ಇಂಡಿಯಾವನ್ನ ದಾರಿ ತಪ್ಪಿಸಿದ್ದು ಯಾರು..? ಈ ಎಲ್ಲಾ ಪ್ರಶ್ನೆಗಳು ಸದ್ಯ ಕೋಟ್ಯಾಂತರ ಕ್ರಿಕೆಟ್​​ ಪ್ರೇಮಿಗಳನ್ನ ಕಾಡುತ್ತಿದೆ. ಆ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ನಿಜಕ್ಕೂ ಟೀಂ ಇಂಡಿಯಾ ಕಳೆದ ಒಂದು ತಿಂಗಳು ಇದ್ದ ಉರುಪಿನಲ್ಲಿ ಇಂದು ಇರಲಿಲ್ಲ. ಕೇವಲ ಗೆಲುವಿನ ರುಚಿಯನ್ನ ನೋಡುತ್ತಿದ್ದ ಬ್ಲೂ ಬಾಯ್ಸ್​​ಗೆ ಸೋಲು ಅನ್ನೋ ವಿಷ ನಿನ್ನೆ ಗಂಟಲು ಸೇರಿಬಿಟ್ಟಿತ್ತು. ಆದರೆ ಇದೇ ಟೀಂ ಇಂಡಿಯಾ ಕಳೆದ ಒಂದು ತಿಂಗಳ ಕಾಲ ಇದ್ದಹಾಗೆ ಇದ್ದಿದ್ರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಅದನ್ನ ಬಿಟ್ಟು ಅತಿಯಾದ ಆತ್ಮವಿಶ್ವಾಸದಿಂದ, ಏನೇ ಮಾಡಿದರೂ ಗೆಲ್ತೀವಿ ಅನ್ನೋ ಅಹಂಕಾರ ನಿನ್ನೆ ಅವರನ್ನ ತಲೆತಗ್ಗಿಸುವಂತೆ ಮಾಡಿದೆ. ಅಷ್ಟಕ್ಕು ಇದಕ್ಕೆಲ್ಲಾ ಕಾರಣ ನಾಯಕ ವಿರಾಟ್​​​ ಕೊಹ್ಲಿ.

ಬೆಂಗಳೂರಿಗೆ ಮೋಸ ಮಾಡಿದ್ರಾ ?

ವಿರಾಟ್​​ ಕೊಹ್ಲಿ ಬೆಂಗಳೂರಿಗರಿಗೆ ಮೋಸ ಮಾಡಿಬಿಟ್ರು. ತನ್ನ 2ನೇ ತವರಿನಲ್ಲಿ ಉದ್ಧಟತನ ಮೆರೆದುಬಿಟ್ರು. ಹಬ್ಬದ ದಿನ ಖುಷಿಯಿಂದ ಎದ್ದು ಸಿಹಿಸುದ್ದಿ ಕೇಳಬೇಕಾಗಿದ್ದ ಜನರಿಗೆ ಕೊಹ್ಲಿ ಕಹಿ ಸುದ್ದಿ ನೀಡುವಂತೆ ಮಾಡಿಬಿಟ್ರು. ವಿರಾಟ್​ ಬೆಂಗಳೂರಿಗೆ ಮಾಡಿರುವ ಈ ದ್ರೋಹವನ್ನ ಇಲ್ಲಿನ ಜನ ಮರೆಯಲು ತಂಬಾ ದಿನಗಳೇ ಬೇಕು ಅನಿಸುತ್ತಿದೆ.

ನಿನ್ನೆಯ ಸೋಲಿಗೆ ಕೊಹ್ಲಿಯೇ ಕಾರಣ..!

ಹ್ಯಾಟ್ರಿಕ್​ ಜಯ ಸಾಧಿಸಿ ಸರಣಿ ಗೆದ್ದಾಗ ಇಡೀ ಭಾರತವೇ ಟೀಂ ಇಂಡಿಯಾ ವೈಟ್​​ ವಾಷ್​​ ಮಾಡಿಬಿಡುತ್ತೆ ಅಂತ ಅಂದುಕೊಂಡಿತ್ತು. ಆದರೆ ಕೊಹ್ಲಿ ಭಾರತೀಯರ ಆಸೆಯನ್ನ ಕಾಲಕೆಳಗೆ ಹಾಕಿಕೊಂಡುಬಿಟ್ಟರು. ಸರಣಿ ಗೆದ್ದುಬಿಟ್ಟು ಮಹಾಸಾಧನೆಯನ್ನ ಮಾಡಿಬಿಟ್ಟಿದ್ದೇವೆ ಅನ್ನೋ ಹಾಗೆ ನಿನ್ನೆಯ ಪಂದ್ಯದಲ್ಲಿ 3 ಬದಲಾವಣೆಗಳನ್ನ ಮಾಡಿಬಿಟ್ಟಿದ್ರು. ಅಷ್ಟೇ ಅಲ್ಲ ಸರಣಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ಕುಲ್​ದೀಪ್​​ ಯಾದವ್​​, ಜಸ್​​ಪ್ರೀತ್​​ ಬುಮ್ರಾ ಮತ್ತು ಭುವನೇಶ್ವರ್​​ ಕುಮಾರ್​​​​ರನ್ನ ಕೂರಿಸಿಬಿಟ್ಟಿದ್ರು.

ಮೂರು ಬದಲಾವಣೆ

ಮೂರು ಬೆಸ್ಟ್​​ ಪ್ಲೇಯರ್​​ಗಳನ್ನ ಕೂರಿಸಿ ಉಮೇಶ್​​ ಯಾದವ್​, ಮೊಹಮ್ಮದ್​​ ಶಮಿ ಮತ್ತು ಅಕ್ಷರ್​​ ಪಟೇಲ್​​ ಏನೋ ಮಾಡಿಬಿಡ್ತಾರೆ ಅಂತ ಕೊಹ್ಲಿ ತಂಡಕ್ಕೆ ಸೇರಿಸಿಕೊಂಡರು. ಆದರೆ ಈ ಮೂರು ಜನ ಏನು ಮಾಡಿದರೂ ಅನ್ನೋದನ್ನ ಹೇಳೋ ಅವಶ್ಯಕತೇ ಇಲ್ಲ. ಬೇಕಾಬಿಟ್ಟಿ ರನ್​​ ನೀಡಿದರು. ಕೊನೆಪಕ್ಷ ​​​ ಕನ್ನಡಿಗ ಕೆ.ಎಲ್​ ರಾಹುಲ್​ನ್ನನ್ನಾದ್ರೂ ಆಡುವ ಹನ್ನೊಂದರಲ್ಲಿ ಸೇರಿಸಿಕೊಂಡಿದ್ದಿದ್ದರೆ ಅಂತಿಮ ಕ್ಷಣದಲ್ಲಿ ತಂಡ ಎಡವುತ್ತಿರಲಿಲ್ಲ. ಆದರೆ ಕೊಹ್ಲಿ ಟೀಂ ಸೆಲಕ್ಷನ್​ನಲ್ಲಿ ಎಡವಟ್ಟು ಮಾಡಿಕೊಂಡುಬಿಟ್ಟರು.

21 ರನ್'ಗೆ ಔಟಾದ ಕೊಹ್ಲಿ

ಮೊದಲೇ ಬೌಲಿಂಗ್​ ಡಿಪಾರ್ಟ್​ಮೆಂಟನ್ನ ಹಾಳು ಮಾಡಿದ್ದ ಕೊಹ್ಲಿ ಬ್ಯಾಟಿಂಗ್​​ನಲ್ಲೂ ಮುಗ್ಗರಿಸಿದ್ದರು. ಬೆಂಗಳೂರಿನಲ್ಲಿ ರನ್​ ಗುಡ್ಡೆಹಾಕಿರುವ ಕೊಹ್ಲಿ ನಿನ್ನೆ ಕೇವಲ 21 ರನ್​ಗಳಿಸಿ ವಿಫಲರಾಗೋದಲ್ಲದೇ, ಉತ್ತಮವಾಗಿ ಆಡ್ತಿದ್ದ ರೋಹಿತ್​​ ಶರ್ಮಾರನ್ನೂ ರನೌಟ್​​ ಮಾಡಿ ಬ್ಯಾಟಿಂಗ್​ ವೈಫಲ್ಯ ಕಾಣಲು ಕಾರಣರಾದರು. ಜೊತೆಗೆ ಬ್ಯಾಟಿಂಗ್ ಆರ್ಡರ್ ಬದಲಿಸಿ ಸೋಲಿನ ಖೆಡ್ಡಕ್ಕೆ ತಳ್ಳಿದರು.

ಒಟ್ಟಿನಲ್ಲಿ ನಿನ್ನೆಯ ಸೋಲಿನ ಹೋಣೆ ವಿರಾಟ್​​ ಕೊಹ್ಲಿಯೇ ಹೊರಬೇಕಾಗಿದ್ದೆ. ಹಬ್ಬಕ್ಕೆ ಸಿದ್ಧತೆ ಮಾಡೋದನ್ನ ಬಿಟ್ಟು ಟಿವಿ ಮುಂದೆ ಕೂತವರೆಲ್ಲಾ ಇಂದು ನಿರಾಸೆ ಅನುಭವಿಸಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್