ಕುಂಬ್ಳೆ ಗುತ್ತಿಗೆ ವಿಸ್ತರಿಸದಿರಲು ಇರುವ ಬಲವಾದ ಕಾರಣ ಇದು
ಕುಂಬ್ಳೆ ಅವರು 'ಆಟಗಾರರ ವೇತನ ಹೆಚ್ಚಳಕ್ಕಾಗಿ ಕುಂಬ್ಳೆ ನೇರವಾಗಿ ಬಿಸಿಸಿಐ ಆಡಳಿತ ಸಮಿತಿಯನ್ನು ಸಂಪರ್ಕಿಸಿ, ವೇತನವನ್ನು ಶೇ.150ರಷ್ಟು ಏರಿಸಬೇಕು ಎಂದು ಕೇಳಿಕೊಂಡಿದ್ದರು. ಜತಗೆ ತಮಗೆ ಸದ್ಯ ಸಿಗುತ್ತಿರುವ 6 ಕೋಟಿ ಬದಲಾಗಿ 7.5 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ತಮ್ಮನ್ನು ಮೀರಿ ಆಡಳಿತ ಸಮಿತಿಯನ್ನು ಪದೇ ಪದೇ ಸಂಪರ್ಕಿಸುತ್ತಿದ್ದ ಕುಂಬ್ಳೆ ವಿರುದ್ಧ ಬಿಸಿಸಿಐ ಹಿರಿಯ ಅಧಿಕಾರಿಗಳು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಕುಂಬ್ಳೆ ಗುತ್ತಿಗೆ ವಿಸ್ತರಿಸದಿರಲು ಬಲವಾದ ಕಾರಣ
