ಐಎಸ್ಎಲ್: ಪ್ರತಿ ವರ್ಷ ಹಾಲಿ ಚಾಂಪಿಯನ್ ತಂಡದ ಪರದಾಟ!ಯಾಕೆ ಹೀಗೆ?
ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರತಿ ವರ್ಷ ಹಾಲಿ ಚಾಂಪಿಯನ್ ತಂಡಗಳು ಪರದಾಡುವುದು ಸರ್ವೇ ಸಾಮಾನ್ಯವಾಗಿದೆ. ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ತಂಡ ಮುಂದಿನ ಆವೃತ್ತಿಯಲ್ಲಿ ಲಾಸ್ಟ್ ಪ್ಲೇಸ್‌ಗೆ ತೃಪ್ತಿಪಡುತ್ತಿದೆ. ಇದಕ್ಕೆ ಈ ಬಾರಿಯಾ ಐಎಸ್ಎಲ್ ಟೂರ್ನಿ ಕೂಡ ಹೊರತಲ್ಲ.
ಬೆಂಗಳೂರು(ಅ.15): ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ತಂಡಗಳು ಪದಾಡುವ ಸಂಪ್ರದಾಯ ಮುಂದುವರಿದಿದೆ. 2014ರಲ್ಲಿ ಹುಟ್ಟಿಕೊಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇದುವರೆಗೂ ಯಾವುದೇ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಗೆದ್ದಿಲ್ಲ.
ಎಟಿಕೆ ತಂಡ ಆರಂಭದ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಆದರೆ 2015ರಲ್ಲಿ ಪ್ಲೇ ಆಫ್ ಹಂತ ತಲುಪಿದರೂ ಆ ಬಾರಿಯ ಚಾಂಪಿಯನ್ ಪಟ್ಟ ಗೆದ್ದಿದ್ದ ಚೆನ್ನೈಯಿನ್ ಎಫ್ ಸಿ ವಿರುದ್ಧ ಸೋಲಿಗೆ ಶರಣಾಯಿತು. ಎಟಿಕೆ ಹಾಗೂ ಚೆನ್ನೈಯಿನ್ ತಂಡಗಳು ಮಾತ್ರ ಎರಡು ಬಾರಿ ಪ್ರಶಸ್ತಿ ಗೆದ್ದಿವೆ. ಆದರೆ ಈ ಎರಡೂ ತಂಡಗಳು ಈ ಬಾರಿಯ ಐಎಸ್‌ಎಲ್‌ನಲ್ಲಿ ಲಯ ಕಂಡುಕೊಳ್ಳುವಲ್ಲಿ ಹರಸಾಹಸ ಪಡುತ್ತಿವೆ.
ಲೀಗ್‌ನಲ್ಲಿ ಇದುವರೆಗೂ ಒಂಬತ್ತು ಪಂದ್ಯಗಳು ಮುಗಿದಿದ್ದರೂ ಈ ಎರಡು ತಂಡಗಳು ಮಾತ್ರ ಜಯ ಗಳಿಸುವಲ್ಲಿ ಎರಡು ಸೋಲಿನೊಂದಿಗೆ ಚೆನ್ನೈಯಿನ್ ಎಫ್ ಸಿ ತಂಡ ಈ ಬಾರಿಯ ಲೀಗ್ ಆರಂಭಿಸಿದೆ. ಬೆಂಗಳೂರು ಹಾಗೂ ಗೋವಾ ತಂಡಗಳ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೋಲನುಭವಿಸಿತ್ತು. ಸ್ಟೀವ್ ಕೊಪ್ಪೆಲ್ ಪಡೆ ಮನೆಯಂಗಣದಲ್ಲಿ ನಡೆದ ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ಸೋಲನುಭವಿಸಿದ್ದವು. ಎಲ್ಲಕ್ಕಿಂತ ಮುಖ್ಯವೆಂಬಂತೆ ತಂಡಗಳು ಗೋಲು ಗಳಿಸಬೇಕಾಗಿರುವುದು ಗಮನಾರ್ಹ.
‘ಏನೇ ಇದ್ದರೂ, ನಾವು ಈ ರೀತಿಯ ಆರಂಭ ನಿರೀಕ್ಷಿಸಿರಲಿಲ್ಲ. ಈ ಲೀಗ್ ಎನ್ನುವುದು 400 ಮೀ. ರೇಸ್ ಇದ್ದಂತೆ. ಆದ್ದರಿಂದ ಮತ್ತೆ ಹೋರಾಟ ನೀಡುತ್ತೇವೆ. ಮುಂದಿನ ಪಂದ್ಯ ಆರಂಭವಾಗುವುದಕ್ಕೆ ಮೊದಲ ನಮಗೆ ಕೆಲವು ದಿನಗಳ ವಿಶ್ರಾಂತಿ ಇದೆ. ದಿಲ್ಲಿ ವಿರುದ್ಧದ ಪಂದ್ಯ ನಮ್ಮ ಪಾಲಿಗೆ ಕಠಿಣವೆನಿಸಲಿದೆ, ನಾವು ಮತ್ತೆ ಲಯ ಕಂಡುಕೊಳ್ಳುವುದಕ್ಕಾಗಿ ಕಠಿಣ ಹೋರಾಟ ನಡೆಸುತ್ತಿದ್ದೇವೆ,‘ ಎಂದು ಎಟಿಕೆ ತಂಡ ಹೆಡ್ ಕೋಚ್ ಸ್ಟೀವ್ ಕೊಪ್ಪೆಲ್ ಹೇಳಿದ್ದಾರೆ.
ಮೆನ್ವೆಲ್ ಲಾನ್ಜರೊಟ್ (ಗೋವಾ), ಕಾಲು ಉಚೆ (ಡೆಲ್ಲಿ ಡೈನಮೋಸ್), ಜಾನ್ ಜಾನ್ಸನ್ (ಬೆಂಗಳೂರು) ಹಾಗೂ ಎವರ್ಟನ್ ಸ್ಯಾಂಟೋಸ್ (ಮುಂಬೈ) ಸೇರಿದಂತೆ ಸ್ಟೀವ್ ಕೊಪೆಲ್ ಎಲ್ಲ ಕ್ಲಬ್‌ಗಳ ಪ್ರಮುಖ ಆಟಗಾರರನ್ನು ತಮ್ಮ ಕ್ಲಬ್‌ಗೆ ಸೇರಿಸಿಕೊಂಡಿದ್ದರು. ಆದರೆ ಈ ತಂಡ ಯಾವುದೇ ವಿಭಾಗದಲ್ಲೂ ಯಶಸ್ಸು ಕಾಣಲಿಲ್ಲ. ಇದರಿಂದಾಗಿ ಆಡಿರುವ ಎರಡು ಪಂದ್ಯಗಳಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿದೆ. ಕೊಪೆಲ್ ತಂಡ ಯಾವಾಗಲೂ ನಿಧಾನಗತಿಯ ಆರಂಭ ಕಾಣುತ್ತದೆ. ಮುಂದಿನ ಪಂದ್ಯಗಳಲ್ಲಿ ಯಶಸ್ಸು ಕಾಣುತ್ತೇವೆ ಎಂಬುದು ತಂಡದ ಕೋಚ್ ಅವರ ನಿಲುವು.
ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿದರೆ ಋತುವಿನ ಮುಂದಿನ ಪಂದ್ಯಗಳಲ್ಲಿ ಆತ್ಮವಿಶ್ವಾಸದ ಹೆಜ್ಜೆ ಇಡಬಹುದು. ಚೆನ್ನೆ‘ಯನ್ ತಂಡದ ಕೋಚ್ ಜಾನ್ ಗ್ರೆಗೊರಿ ಅವರದ್ದೇ ಆದ ಸಮಸ್ಯೆ ಹೊಂದಿದ್ದಾರೆ. ಈ ತಂಡದಲ್ಲಿ ಮಿಡ್ ಫೀಲ್ಡ್ ವಿಭಾಗದ ಸಮಸ್ಯೆ ಗಂಭೀರವಾಗಿದೆ. ಧನಪಾಲ್ ಗಣೇಶ್ ಗಾಯಗೊಂಡಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ಜರ್ಮನ್‌ಪ್ರೀತ್ ಸಿಂಗ್ ಹಾಗೂ ಇಸಾಕ್ ವನ್ಮಾಲಸ್ವಮಾ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಂಗಣಕ್ಕಿಳಿಯಬೇಕಾಯಿತು, ಆದರೆ ಗೋವಾ ತಂಡ ಈ ಬದಲಾವಣೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಆಡಿರುವ ಎರಡು ಪಂದ್ಯಗಳಲ್ಲಿ ಪ್ರಮುಖ ಅಸ್ತ್ರ ಎನಿಸಿರುವ ಜೆಜೆ ಲಾಲ್‌ಪೆಖ್ಲುವಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣ. ಈ ಆವೃತ್ತಿಯ ಆರಂಭಿಕ ಹಂತದಲ್ಲಿ ತಂಡದ ಅಂಕ ನೋಡಿ ನಿರ್ಧರಿಸಲು ಸಾಧ್ಯವಿಲ್ಲ. ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದ ಅಚ್ಚರಿ ಫಲಿತಾಂಶ ನೀಡಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಊದಾಹರಣೆಗಳಿವೆ.