ಆರ್‌ಟಿಐ ಅಡಿ ಬಂದರೆ ಯಾವೆಲ್ಲಾ ಮಾಹಿತಿಗಳನ್ನು ಸಾರ್ವಜನಿಕರು ಕೇಳಬಹುದು ಎನ್ನುವುದರ ಅರಿವು ಬಿಸಿಸಿಐಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಒಂದೊಮ್ಮೆ ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡರೆ ಯಾವೆಲ್ಲಾ ಮಾಹಿತಿ ಹೊರಬರಬಹುದು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು[ಅ.03]: ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಸೇರ್ಪಡೆಗೊಳ್ಳಲು ಏಕೆ ನಿರಾಕರಿಸುತ್ತಿದೆ ಇಲ್ಲವೇ ಹಿಂಜರಿಯುತ್ತಿದೆ ಎನ್ನುವುದನ್ನು ಕ್ರಿಕೆಟ್‌ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. 

ಇದನ್ನು ಓದಿ: ಆಡಳಿತ ಸಮಿತಿ ಮೇಲೆ ಬಿಸಿಸಿಐ ಗರಂ!

ಆರ್‌ಟಿಐ ಅಡಿ ಬಂದರೆ ಯಾವೆಲ್ಲಾ ಮಾಹಿತಿಗಳನ್ನು ಸಾರ್ವಜನಿಕರು ಕೇಳಬಹುದು ಎನ್ನುವುದರ ಅರಿವು ಬಿಸಿಸಿಐಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಒಂದೊಮ್ಮೆ ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡರೆ ಯಾವೆಲ್ಲಾ ಮಾಹಿತಿ ಹೊರಬರಬಹುದು ಎನ್ನುವ ವಿವರ ಇಲ್ಲಿದೆ.

* ತಂಡದ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ?

* ಆಯ್ಕೆ ಪ್ರಕ್ರಿಯೆಯಲ್ಲಿ ಐಪಿಎಲ್‌ ಫ್ರಾಂಚೈಸಿಗಳ ಪಾತ್ರವಿದೆಯೇ?

* ಷೇರು ಹಂಚಿಕೆ ಮಾದರಿ, ಬಂಡವಾಳ ಹೂಡಿಕೆ ವಿವರ

* ಆಡಳಿತದಲ್ಲಿರುವ ಕೆಲ ಹಿರಿಯ ಅಧಿಕಾರಿಗಳು ವರ್ತನೆ

* ಕಾರ್ಯ ಸ್ಥಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳ ಕುರಿತ ಮಾಹಿತಿ

* ಹಿರಿಯ ಆಟಗಾರರು ನಡೆಸುತ್ತಿರುವ ಸಂಸ್ಥೆಗಳೊಂದಿಗೆ ಒಪ್ಪಂದದಲ್ಲಿರುವ ಕಿರಿಯ ಆಟಗಾರರಿಗೆ ಅವಕಾಶವಿದೆಯೇ?

* ಆಟಗಾರರ ಜಾಹೀರಾತು ಒಪ್ಪಂದಗಳು ಎಷ್ಟು ಪಾರದರ್ಶಕವಾಗಿವೆ?

* ವಿವಿಧ ವಯೋಮಿತಿಗಳ ತಂಡಗಳಿಗೆ ನಡೆಸುತ್ತಿರುವ ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ