ಮಾಸ್ಕೋ[ಜು.16]: ರಷ್ಯಾದಲ್ಲಿ ಒಂದು ತಿಂಗಳುಗಳ ಕಾಲ ನಡೆದ 2018ನೇ ಸಾಲಿನ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯು ಫ್ರಾನ್ಸ್ ಚಾಂಪಿಯನ್ ಆಗುವುದರೊಂದಿಗೆ ತೆರೆಬಿದ್ದಿತು. ಜಗತ್ತಿನಾದ್ಯಂತ ಫುಟ್ಬಾಲ್ ಅಭಿಮಾನಿಗಳನ್ನು ಉಸಿರು ಬಿಗಿ ಹಿಡಿಯುವಂತೆ ಮಾಡಿದ್ದ ಟೂರ್ನಿಗೆ ಭಾನುವಾರ ತಡರಾತ್ರಿ ಅಧಿಕೃತವಾಗಿ ಮುಕ್ತಾಯದ ಮುದ್ರೆ ಬಿದ್ದಿತು.

ಫಿಫಾ ವಿಶ್ವಕಪ್’ನಲ್ಲಿ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಗೆದ್ದಿದ್ದು ಯಾರು..? ಈ ಬಾರಿಯ ಫಿಫಾ ವಿಶ್ವಕಪ್’ನ ಪ್ರಮುಖ ಸ್ವಾರಸ್ಯಕರ ಅಂಕಿ ಅಂಶ ನಿಮ್ಮ ಮುಂದೆ..

ಗೋಲ್ಡನ್ ಬೂಟ್ : ಹ್ಯಾರಿ ಕೇನ್ - ಇಂಗ್ಲೆಂಡ್ 

ಗೋಲ್ಡನ್ ಬಾಲ್ : ಲೂಕಾ ಮೋಡ್ರಿಚ್ - ಕ್ರೊವೇಷಿಯಾ

ಗೋಲ್ಡನ್ ಗ್ಲೌ : ಥೈಬಟ್ ಕೋರ್ಟಿಸ್ - ಬೆಲ್ಜಿಯಂ

ಉದಯೋನ್ಮುಕ ಆಟಗಾರ : ಕಿಲಿಯನ್ ಎಂಬಾಪರ - ಫ್ರಾನ್ಸ್

ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು:
169: ಈ ಬಾರಿಯ ವಿಶ್ವಕಪ್’ನಲ್ಲಿ ದಾಖಲಾದ ಒಟ್ಟು ಗೋಲುಗಳ ಸಂಖ್ಯೆ

01: 1958ರ ಬಳಿಕ ವಿಶ್ವಕಪ್ ಫೈನಲ್’ನಲ್ಲಿ ಗೋಲುಗಳಿಸಿದ ಅತಿ ಕಿರಿಯ ಆಟಗಾರ[19 ವರ್ಷ] ಕಿಲಿಯನ್ ಎಂಬಾಪೆ

21: ಪೆನಾಲ್ಟಿ ಕಿಕ್ ಮೂಲಕ ದಾಖಲಾದ ಒಟ್ಟು ಗೋಲುಗಳ ಸಂಖ್ಯೆ 21

02: ಈ ವಿಶ್ವಕಪ್’ನಲ್ಲಿ ಇಬ್ಬರು ಆಟಗಾರರು[ಹ್ಯಾರಿ ಕೇನ್, ರೊನಾಲ್ಡೊ] ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ.