ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಬೆಸ್ಟ್ ಫುಟ್ಬಾಲ್ ಪಟು ಯಾರು?

First Published 22, Jun 2018, 6:08 PM IST
Who is the best Footballer in Indian Cricket team?
Highlights

ದೇಶದೆಲ್ಲಡೆ ಈಗ ಫಿಫಾ ವಿಶ್ವಕಪ್ ಜ್ವರ ಆವರಿಸಿದೆ. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಹೊರತಾಗಿಲ್ಲ. ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಅಭ್ಯಾಸದ ವೇಳೆ ಫುಟ್ಬಾಲ್ ಆಟವನ್ನೇ ಹೆಚ್ಚಾಗಿ ಆಡ್ತಾರೆ. ಹಾಗಾದರೆ ತಂಡಲ್ಲಿರೋ ಬೆಸ್ಟ್ ಫುಟ್ಬಾಲ್ ಆಟಗಾರರು ಯಾರು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.
 

ಚಂಡಿಘಡ(ಜೂ.22):  ಟೀಂ ಇಂಡಿಯಾ ಕ್ರಿಕೆಟಿಗರ ಫುಟ್ಬಾಲ್ ಪ್ರೇಮ ಬಿಡಿಸಿ ಹೇಳಬೇಕಾಗಿಲ್ಲ. ಧೋನಿ ಬಾಲ್ಯದಲ್ಲಿ ಫುಟ್ಬಾಲ್ ಗೋಲು ಕೀಪರ್ ಆಗಿದ್ರೆ, ವಿರಾಟ್ ಕೊಹ್ಲಿ ಫುಟ್ಬಾಲ್ ಕ್ರೀಡೆಯಲ್ಲೂ ಆಸಕ್ತಿಹೊಂದಿದ್ದರು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಅತ್ಯುತ್ತಮ ಫುಟ್ಬಾಲ್ ಪಟು ಯಾರು ಅನ್ನೋದನ್ನ ಆಲ್‌ರೌಂಡರ್ ಯುವರಾಜ್ ಸಿಂಗ್ ಬಹಿರಂಗ ಪಡಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಫುಟ್ಬಾಲ್ ಆಟಗಾರರಷ್ಟೇ  ಫಿಟ್ ಆಗಿದ್ದಾರೆ. ಬಾಲ್ ಜೊತೆಗೆ ಮೈದಾನದ ಮೂಲೆ ಮೂಲೆಗೆ ಓಡಬಲ್ಲರು. ಆದರೆ ಕೊಹ್ಲಿ ಗೋಲು ಬಾರಿಸುವಲ್ಲಿ ವಿಫಲರಾಗುತ್ತಾರೆ. ಫುಟ್ಬಾಲ್ ಸ್ಕಿಲ್ಸ್ ಇದ್ದರೂ ಫಿನೀಶ್ ಮಾಡಲು ಕೊಹ್ಲಿ ತಡಕಾಡುತ್ತಾರೆ ಎಂದು ಯುವಿ ಹೇಳಿದ್ದಾರೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವೇಗಿ ಜಸ್‌ಪ್ರೀತ್ ಬುಮ್ರಾಗೆ ಫುಟ್ಬಾಲ್ ಒಂದು ಆಟವೇ ಅಲ್ಲ. ಬುಮ್ರಾ ಫುಟ್ಬಾಲ್ ಆಡೋದೇ ಇಲ್ಲ. ಇನ್ನು ಪಾಂಡ್ಯ ಕೆಟ್ಟ ಫುಟ್ಬಾಲ್ ಪಟು ಎಂದು ಯುವಿ ಟೀಂ ಇಂಡಿಯಾ ಕ್ರಿಕೆಟಿಗರ ಫುಟ್ಬಾಲ್ ಕೌಶಲ್ಯವನ್ನ ಬಹಿರಂಗಪಡಿಸಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತನಗೆ ಬಂದ ಬಾಲ್ ಪಾಸ್ ಮಾಡಿ ಸುಮ್ಮನಿರುತ್ತಾರೆ. ರೋಹಿತ್ ನಿಂತಲ್ಲೇ ನಿಂತಿರುತ್ತಾರೆ ಎಂದಿದ್ದಾರೆ. ಯುವಿ ಪ್ರಕಾರ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಬೆಸ್ಟ್ ಫುಟ್ಬಾಲ್ ಪಟು ಎಮ್ ಎಸ್ ಧೋನಿ. ಧೋನಿ ಗೋಲು ಬಾರಿಸೋದರಲ್ಲೂ ನಿಸ್ಸೀಮ. ಇಷ್ಟೇ ಅಲ್ಲ ಪಾಸಿಂಗ್ ಅಕ್ಯೂರೆಸಿ, ಶಾಟ್ಸ್ ಆನ್ ಟಾರ್ಗೆಟ್ ಕೂಡ ಅಷ್ಟೇ ಉತ್ತಮವಾಗಿರುತ್ತೆ ಎಂದು ಯುವಿ ಹೇಳಿದ್ದಾರೆ.

loader