ಕೇವಲ 6 ಟೆಸ್ಟ್ ಹಾಗೂ 17 ಏಕದಿನ ಪಂದ್ಯವಾಡಿದಾತ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಭವಿಷ್ಯದ ಬಗ್ಗೆ ನಿರ್ಧರಿಸುತ್ತಿರುವುದು ದುರಂತವೆಂದು ಕ್ರಿಕೆಟ್ ಅಭಿಮಾನಿಯೊಬ್ಬ ವ್ಯಂಗ್ಯವಾಡಿದ್ದಾನೆ.

ನವದೆಹಲಿ(ಆ.16): ನಮ್ಮ ನಿರೀಕ್ಷೆಗೆ ತಕ್ಕಂತೆ ಎಂ.ಎಸ್.ಧೋನಿ ಆಡದಿದ್ದರೆ, ಅವರ ಬದಲಿಗೆ ಮತ್ತೋರ್ವ ಆಟಗಾರನನ್ನು ಹುಡುಕುವುದು ಅನಿವಾರ್ಯ ಎಂದಿರುವ ಭಾರತ ಕ್ರಿಕೆಟ್ ತಂಡದ ಪ್ರಧಾನ ಆಯ್ಕೆದಾರ ಎಂ.ಎಸ್.ಕೆ.ಪ್ರಸಾದ್ ವಿರುದ್ಧ ಧೋನಿ ಅಭಿಮಾನಿಗಳು ಕಿಡಿಕಾರಿದ್ದಾರೆ.

2019ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬಲಿಷ್ಟ ತಂಡ ಕಟ್ಟುವ ಉದ್ದೇಶದಿಂದ ಯಾರು ಉತ್ತಮವಾಗಿ ಪ್ರದರ್ಶನ ತೋರುತ್ತಾರೋ ಅಂತವರಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದು ಟೀಂ ಇಂಡಿಯಾ ಪ್ರಧಾನ ಆಯ್ಕೆದಾರ ಎಂ.ಎಸ್.ಕೆ ಪ್ರಸಾದ್ ಹೇಳಿದ್ದರು. ಅದರಲ್ಲೂ ಟೀಂ ಇಂಡಿಯಾ ಮಾಜಿ ನಾಯಕ ಭವಿಷ್ಯದ ಬಗ್ಗೆಯೂ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚೆಸಲಾಯಿತು ಎಂದು ಪ್ರಸಾದ್ ಹೇಳಿದ್ದರು. ಇದು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಕೇವಲ 6 ಟೆಸ್ಟ್ ಹಾಗೂ 17 ಏಕದಿನ ಪಂದ್ಯವಾಡಿದಾತ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಭವಿಷ್ಯದ ಬಗ್ಗೆ ನಿರ್ಧರಿಸುತ್ತಿರುವುದು ದುರಂತವೆಂದು ಕ್ರಿಕೆಟ್ ಅಭಿಮಾನಿಯೊಬ್ಬ ವ್ಯಂಗ್ಯವಾಡಿದ್ದಾನೆ.

‘ಪ್ರಸಾದ್ ನಿಮ್ಮ ಅಂಕಿ ಅಂಶಗಳನ್ನು ಒಮ್ಮೆ ನೋಡಿ. ಧೋನಿಯಂತೆ ಒಂದೇ ಒಂದು ಸ್ಟಂಪ್ ಮಾಡಿ ತೋರಿಸಿ’ ಎಂದು ಅಭಿಮಾನಿಯೊಬ್ಬ ಸವಾಲೆಸೆದಿದ್ದಾನೆ. ಮತ್ತೊಬ್ಬ ಅಭಿಮಾನಿ, ‘ಬಲವಂತವಾಗಿ ನಾಯಕ ಸ್ಥಾನದಿಂದ ಧೋನಿಯನ್ನು ಕೆಳಗಿಳಿಸಲಾಯಿತು. ಇದೀಗ ನಿವೃತ್ತಿ ಘೋಷಿಸಲು ಧೋನಿ ಮೇಲೆ ಪ್ರಸಾದ್ ಒತ್ತಡ ಹೇರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗಿದೆ ಧೋನಿ ಅಭಿಮಾನಿಗಳು ಮಾಡಿರುವ ಟ್ವೀಟ್'ಗಳು...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…